SHARE

ಬೆಳಗಾವಿ: ನೆರೆ ಸಂತ್ರಸ್ಥರಿಗೆ ರಾಜ್ಯಕ್ಕೆ ಕೇಂದ್ರ ಸರಕಾರ ದೇಶದಲ್ಲಿಯೇ ಅತಿ ಹೆಚ್ಚು ಪರಿಹಾರ ನೀಡಿದ್ದು ಕೇಂದ್ರವು ತುರ್ತು ಹಂತದ ಪರಿಹಾರ ಬಿಡುಗಡೆ ಮಾಡಿದೆ ಎಂದು ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ವಿಶ್ವನಾಥ ಪಾಟೀಲ ಹೇಳಿದರು. ಇಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ನೆರೆ ಸಂತ್ರಸ್ಥರಿಗೆ ಪ್ರಾರಂಭದಲ್ಲಿ ಹತ್ತು ಸಾವಿರ ಚೆಕ್ ವಿತರಣೆ ಮಾಡಲಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಪರಿಹಾರವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದ್ದು, ಮನೆಗಳ ನಿರ್ಮಾಣಕ್ಕೆ ₹5 ಲಕ್ಷ ಘೋಷಣೆ ಮಾಡಿದೆ.

ಒಂದು ಲಕ್ಷ ಈಗಾಗಲೇ ಸಂತ್ರಸ್ಥರಿಗೆ ಹಂಚಲಾಗಿದ್ದು ಇನ್ನುಳಿದ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಿದೆ. ದಳ್ಳಾಳಿಗಳ ಹಾವಳಿ ಇಲ್ಲದೇ ಉತ್ತಮ ರೀತಿಯಲ್ಲಿ ರಾಜ್ಯ ಸರಕಾರ ಕೆಲಸ ಮಾಡಿದೆ ಮತ್ತು ನಮ್ಮ ಮನವಿಗೆ ಓಗೊಟ್ಟು ಕೇಂದ್ರವು ರಾಜ್ಯಕ್ಕೆ  ತುರ್ತು ₹1200 ಕೋಟಿ ಬಿಡುಗಡೆ ಮಾಡಿದೆ ಎಂದರು. ರಾಜ್ಯ ವಕ್ತಾರ ಎಂ.ಬಿ. ಝಿರಲಿ, ರಾಜು ಚಿಕ್ಕನಗೌಡ್ರ, ಧನಂಜಯ ಜಾಧವ, ನ್ಯಾಯವಾದಿ ಬಸವರಾಜ ರೊಟ್ಟಿ, ಪ್ರಭು ಹೂಗಾರ, ಗೂಳಪ್ಪಾ ಹೊಸಮನಿ ಹಾಜರಿದ್ದರು.