SHARE

ಬೆಳಗಾವಿ: ಮಹತ್ವದ ಬೆಳೆವಣಿಗಯಲ್ಲಿ ಗೋಕಾಕ್ ಸಾಹುಕಾರ್, ಅನರ್ಹ ಶಾಸಕ್ ರಮೇಶ್ ಜಾರಕಿಹೊಳಿ ಭೇಟಿಗೆ ಬೆಳಗಾವಿ ಗ್ರಾಮೀಣ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಇಂದು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಆಗಮಿಸಿದ್ದರು ಎನ್ನಲಾಗಿದೆ. ರಮೇಶ್ ಜೊತೆ ಹೆಬ್ಬಾಳ್ಕರ್ ಸಹೋದರ ಅರ್ಧ ಘಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ. ಯಾವ ವಿಚಾರಕ್ಕೆ ರಮೇಶ್ ಜಾರಕಿಹೊಳಿ ಅವರನ್ನ ಭೇಟಿಯಾದರು ಅನ್ನೋದು ತಿಳಿದು ಬಂದಿಲ್ಲ. ಡಿಸೇಂಬರ 5ರಂದು ಗೋಕಾಕ್ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಸದ್ಯ ರಮೇಶ್ ಜಾರಕಿಹೊಳಿ ಅನರ್ಹಗೊಂಡಿರುವ ಹಿನ್ನಲೆಯಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾರೆ.