SHARE

ಬೆಳಗಾವಿ: ಗೋಕಾಕ್ ನಗರ ಪ್ರವಾಹಕ್ಕೆ ತುತ್ತಾಗಿ ನಲುಗಿದ ವಿಚಾರಕ್ಕೆ ಸಂಬಂಧಿಸಿ ನಗರಸಭೆ ಅವ್ಯವಹಾರಗಳನ್ನು ಖಂಡಿಸಿ, ಆಗಿರುವ ಅವ್ಯವಹಾರ ಜನರಿಗೆ ತಲುಪಿಸಲು ಮಾಜಿ ಸಚಿವ ಸತೀಶ ಜಾರಕಿಹೊಳಿ ಹಾಡಿನ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ದ್ರೋಹದ ಕಥೆ ಕೇಳಿರಣ್ಣ ಎಂದು ಹಾಡು ರಚನೆ ಮಾಡಲಾಗಿದ್ದು, ಪ್ರವಾಹ ಸಂದರ್ಭದ ಬರ್ಡವಿವ್ ಚಿತ್ರಣ ನೀಡಲಾಗಿದೆ. ಆರೋಪ ಸರಿ ಇದ್ರೆ ಲೈಕ್ ಮಾಡಿ, ಶೆರ್ ಮಾಡಿ ಎಂದು ಮನವಿ ಸಹ ಮಾಡಲಾಗಿದೆ. ಉಪಚುನಾವಣೆ ಮೊದಲು ಗೋಕಾಕ್ ನಲ್ಲಿ ಫುಲ್ ರಾಜಕೀಯ ನಡೆದಿದ್ದು ಈಗ ಗಮನ ಸೆಳೆದಿದೆ.