SHARE

ಬೆಳಗಾವಿ: ಬಸ್ ಪಾಟಾ ಕ್ಲ್ಯಾಂಪ್ ಕಟ್ ಹಿನ್ನೆಲೆ ರಸ್ತೆ ಮೇಲೆ‌ ಬಸ್ ಪಲ್ಟಿಯಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಪ್ಪಲಕಟ್ಟಿ ಗ್ರಾಮದ ‌ಬಳಿ ಘಟನೆ ಪಾಟಾ ಕ್ಯ್ಲಾಂಪ್ ಕಟ್ ಆಗಿದ್ದರಿಂದ ಬಸ್ ಹಿಂದಿನ ಎರಡೂ ಚಕ್ರಗಳು ಬೇರ್ಪಟ್ಟು ಬಸ್ ಉರುಳಿದೆ. ಬಸ್ ನಲ್ಲಿ ಹಲವು ಪ್ರಯಾಣಿಕರಿಗೆ ಗಾಯವಾಗಿದ್ದು. ಭಾರೀ ಅನಾಹುತ ತಪ್ಪಿದೆ. ಮುನವಳ್ಳಿ ಇಂದ ಕಟಕೋಳದೆಡೆಗೆ ಹೊರಟಿದ್ದ ಬಸ್ ಪಲ್ಟಿಯಾಗಿದ್ದು, ಸ್ಥಳಕ್ಕೆ ಕಟಕೋಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.