SHARE

ಬೆಳಗಾವಿ: ನಗರದ ಲವ್ ಡೇಲ್ ಕೇಂದ್ರೀಯ ಶಾಲೆಯ ಗರ್ಲ್ಸ್ ಫುಟಬಾಲ್ U-17-19 ಟೂರ್ನಿ ನಾಳೆ ಅ.10ರಿಂದ 13ರವರೆಗೆ ನಗರದಲ್ಲಿ ನಡೆಯಲಿದೆ. ಇಂದು ಸುದ್ದಿಗೋಷ್ಟಿಯಲ್ಲಿ ವಿಷಯ ತಿಳಿಸಿದ ಶಾಲಾ ಪ್ರಾಚಾರ್ಯೆ ಲಕ್ಷ್ಮೀ ಇಂಚಲ CBSE ಸೌಥ ಜೋನ್ -2 ವತಿಯಿಂದ ನಗರದಲ್ಲಿ ಪ್ರಥಮ ಬಾರಿಗೆ ನಗರದಲ್ಲಿ ಇಂತಹ ವಿಶೇಷ ಟೂರ್ನಿ ನಡೆಯಲಿದೆ. ರಾಜ್ಯ ಫುಟಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ವುಮನ್ ಫುಟಬಾಲ್ ಅಸೊಸಿಯೇಶನ್ ಅಧ್ಯಕ್ಷ ಎಂ. ಸತ್ಯನಾರಾಯಣ ಹಾಗೂ ಇಂಟರನ್ಯಾಷನಲ್ ಫುಟಬಾಲ್ ತನ್ವೀ ಹ್ಯಾನ್ಸ್ ಮುಖ್ಯ ಅತಿಥಿಗಳು ಆಗಮಿಸಲಿದ್ದಾರೆ.

ನಾಳೆ ಬೆಳಿಗ್ಗೆ 30 ಶಾಲೆಯ 36ಹುಡುಗಿಯರ ಫುಟವಾಲ್ ತಂಡಗಳ ಆಟ ನಡೆಯಲಿದ್ದು ಕೇರಳದಿಂದ ನಾಲ್ಕು ಹಾಗೂ ಗೋವಾದಿಂದ ಎರಡು, ಕರ್ಬಾಟಕದಿಂದ 11, ಮಹಾಎಆಷ್ಟ್ರ 13 ತಂಡಗಳು ಆಗಮಿಸಲಿವೆ. ಸಿಬಿಎಸ್ ಇ ಶಾಲೆಗಳಿಂದ ಬೆಳಗಾವಿಯಲ್ಲಿ ಇದು ಪ್ರಥಮ ಪ್ರಯತ್ನವಾಗಿದೆ, ನಗರದ 5 CBSE ಶಾಲೆಗಳು ಭಾಗವಹಿಸಲಿವೆ ಎಂದರು. ಶಾಲೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರೇರಣಾ ಘಾಟಗೆ, ಕ್ರೀಡಾ ವಿಭಾಗ ಮುಖ್ಯಸ್ಥ ಬಸಲಿಂಗೇಗೌಡ ಅಗಸಗಿ ಉಪಸ್ಥಿತರಿದ್ದರು.