SHARE

ಬೆಳಗಾವಿ: ದುರ್ಗಾಮಾತಾ ದೌಡ ಗುಂಪಿನ ಮೇಲೆ ಲಾರಿ ಹರಿದು ಬಾಲಕ ಸೇರಿ ಮೂವರು ಸಾವೀಗೀಡಾದ ಘಟನೆ ಕಾಗವಾಡ ಸಮೀಪದ ಗಣೇಶವಾಡಿ ಗ್ರಾಮದ ಬಳಿ ನಡೆದಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ಬಳಿಯ ಗಣೇಶವಾಡಿ ಗ್ರಾಮದ ಬಾಲಕ ಹನಸೇನ ಗೂಳಪ್ಪನವರ(೨) ಸೇರಿದಂತೆ ಮೂವರು ಸಾವು ಕಂಡಿದ್ದಾರೆ.

ನಿನ್ನೆ ತಡರಾತ್ರಿ ದುರ್ಗಾಮಾತಾ ದೌಡ ತೆರಳುವಾಗ ಅವಘಡ ನಡೆದಿದೆ. ಸಂಜಯ ರಾವಸಾಬ ಪಾಟೀಲ (೪೦), ಸಚಿನ ಕರಗೌಡ ಪಾಟೀಲ (೩೫) ಮೃತರು. ಮೃತರೆಲ್ಲರೂ ಗಣೇಶವಾಡಿ ಗ್ರಾಮದ ನಿವಾಸಿಗಳು, ೫ ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಮಿರಜ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಾರಾಷ್ಟ್ರ ರಾಜ್ಯದ ಗಣೇಶ ನಗರ ಗ್ರಾಮ, ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಗಣೇಶವಾಡಿ ಗ್ರಾಮಗಳಾಗಿದ್ದು, ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.