SHARE

ಬೆಳಗಾವಿ: ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬೆಳಗಾವಿ ಸುವರ್ಣ ಸೌಧದಲ್ಲಿ ಕುರಿ ನುಗ್ಗಿಸಲು ಯತ್ನಿಸಿ ವಾಟಾಳ ನಾಗರಾಜ ಬಂಧನಕ್ಕೊಳಗಾಗಿದ್ದಾರೆ. ಕನ್ನಡ ಪಕ್ಷದ ಹೋರಟಗಾರ ವಾಟಾಳ ನಾಗರಾಜ ಇಂದು ಸುವರ್ಣಸೌಧಕ್ಕೆ ತೆರಳುತ್ತಿದ್ದ ಮಾರ್ಗಮಧ್ಯೆಯೇ ರಾಷ್ಟ್ರೀಯ ಹೆದ್ದಾರಿಯಲ್ಲಿ ವಶಕ್ಕೆ ಪಡೆಯಲಾಯಿತು.

ಸುವರ್ಣಸೌಧದಲ್ಲಿ ಅಧಿವೇಶನ ಆಗಬೇಕು ಎಂದು ಪ್ರತಿಬಟನೆ ನಡೆಸಿದರು. ಸರಕಾರದ ಶಾಸಕರು, ಸಚಿವರುಗಳು ಕುರಿಗಳು ಇದ್ದಂತೆ, ಇವರಿಗೆ ಬೆಳಗಾವಿಯಲ್ಲಿ ಅದಿವೇಶನ ನಡೆಸಲು ತಾಕತ್ತು ಇಲ್ಲ, ಉತ್ತರ ಕರ್ನಾಟಕದ ಬಗ್ಗೆ ಬಿಜೆಪಿ ಸರಕಾರಕ್ಕೆ ಕರುಣೆ ಇಲ್ಲ, ಬಿಜೆಪಿ ಶಾಸಕರೆ ನೀವು ಅಲ್ಲೆ ಕುಳಿತುಕೊಳ್ಳಿ, ಶಾಸಕರ ಭವನದಲ್ಲಿ ಮಲಗಿಕೊಳ್ಳಿ, ಸುವರ್ಣಸೌದವನ್ನು ಜನಜಾನುವಾರುಗಳಿಗೆ ಕಟ್ಟಲಿಕ್ಕೆ ಅನುವು ಮಾಡಿಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುರಿಗಳನ್ನ ಬಂದಿಸಿ ಎಂದರೆ ಪೊಲೀಸರು ನನ್ನನ್ನ ವಶಕ್ಕೆ ತೆಗೆದುಕ್ಕೊಂಡಿದ್ದಾರೆ. ಯಡಿಯೂರಪ್ಪ ಅವರಿಗೆ ಒಳ್ಳೆಯ ರಾಜ್ಯಾಂಗ ಆಡಳಿತ ಕೊಡಲಿಕ್ಕೆ ಆಗಲಿಲ್ಲ ಅಂದ್ರೆ ರಾಜಿನಾಮೆ ಕೊಟ್ಟು ಬನ್ನಿ ಎಂದರು.

ವಿದಾನಸೌದದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ಸ್ಪಿಕರ್ ಒಬ್ಬ ಅವಿವೇಕಿ, ಅವನು‌ ನಾಲ್ಕನೆಯ ಅಂಗವನ್ನ ಹತ್ತಿಕ್ಕಲು ಹೊಗುತ್ತಿದ್ದಾರೆ ಎಂದು ಹರಿಹಾಯ್ದರು. ಮಾಧ್ಯಮಗಳಿಗೆ ನಿರ್ಬಂದ ಹೇರಿ ಅವರು ಸೌಧದ ಒಳಗೆ ಬಟ್ಟೆ ಕಳೆದುಕ್ಕೊಂಡು ಕುಣಿದರೂ ಎನು ಮಾಡಲಿಕ್ಕೆ ಆಗಲ್ಲ, ಸ್ಪಿಕರ್ ಅವರು ಸಿಎಂ ಏಜಂಟ್ ಆಗಿ ಕೆಲಸವನ್ನ ಮಾಡುತ್ತಿದ್ದಾರೆ, ಸ್ಪಿಕರ್ ರಾಜಿನಾಮೆ ಕೊಡಬೇಕು ಇಂತಾ ಸ್ಪಿಕರ್ ಬೆಡವೇ ಬೆಡಾ ಎಂದು ವಾಟಾಳ ಹರಿಹಾಯ್ದರು. ಸ್ಪಿಕರ ನಾಳೆ ಬೆಳಿಗ್ಗೆ ಒಳಗಾಗಿ ಮಾದ್ಯಮದವರ ಮೆಲೆ ಹೇರಿದ ನಿರ್ಬಂದವನ್ನ ವಾಪಸ್ಸು ಪಡೆಯಬೇಕು, ಇಲ್ಲದಿದ್ದರೆ ಕರ್ನಾಟಕ ಬಂದ ಕರೆ ಕೊಡಲಾಗುವುದು, ನಾಳೆ ಬೆಂಗಳೂರಿನಲ್ಲಿ ಸಭೆ ಮಾಡಿ ಮಾದ್ಯಮದವರ ನಿರ್ಬಂದ ವಿಚಾರ ಚರ್ಚಿಸಲಾಗುವುದು ಎಂದರು.