SHARE

ಬೆಳಗಾವಿ: ಹೊಟೇಲ್ ವೇಟರ್ ಸರ್ವಿಸ್ ತಡ ಮಾಡಿದ ಎಂಬ ಕಾರಣವೊಡ್ಡಿ ಮಾಜಿ ಮಹಿಳಾ ಕಾರ್ಪೊರೇಟರ್ ಒಬ್ಬರ ಮಗ ದುಂಡಾವರ್ತನೆ ತೋರಿದ್ದಾನೆ. ನಗರದ ನೆಹರೂ ನಗರ ಹೊಟೇಲ್ ಗೆ ತೆರಳಿದ್ದ ಮಾಜಿ ಕಾರ್ಪೊರೇಟರ್ ಜಯಶ್ರೀ ಮಾಳಗಿ ಪುತ್ರ ಅಶೋಕ ಮಾಳಗಿ ಮತ್ತು ಆತನ ನಾಲ್ವರು ಸಹಚರರು ವೇಟರನನ್ನು ಜನರಿಂದ ತುಂಬಿದ್ದ ಹೊಟೇಲನಲ್ಲಿ ಮನಬಂದಂತೆ ಅಟ್ಟಾಡಿಸಿ ಥಳಿಸಿದ್ದಲ್ಲದೇ ಆತನ ಕಡೆಯಿಂದ ಕಾಲಿಗೆ ಬೀಳಿಸಿಕೊಂಡು ದುಂಡಾವರ್ತನೆ ಮಾಡಿದ್ದು ನಡುಮಧ್ಯಾಹ್ನ ನಡೆದಿದೆ. ಘಟನಾವಳಿ ಸಿಸಿಟಿವಿಯಲ್ಲಿ ದಾಖಲಾದರೂ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ವಿಳಂಬವಾಗಿರುವುದು ಸೋಜಿಗ ಮೂಡಿಸಿದೆ. ವ್ಯವಸ್ಥೆ ಮೌನಕ್ಕೆ ಜಾರಿದರೆ ಬಡಿಸಿಕೊಂಡವನ ವೇದನೆ ಏನು ಎಂಬ ಪ್ರಶ್ನೆ ಮೂಡಿಸಿದೆ.