SHARE

ಬೆಳಗಾವಿ: ಮರಾಠಾ ಮಂಡಳ ರಜತ ಮಹೋತ್ಸವ ಅಕ್ಟೋಬರ್ 13ರಂದು ನಡೆಯಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಹಲಗೇಕರ ಡೆಂಟಲ್ ಸೈನ್ಸ್ & ರಿಸರ್ಚ್ ಅತ್ಯಾಧುನಿಕ ಸೆಂಟರ್ ರಜತ ಮಹೋತ್ಸವ ನಡೆಯಲಿದೆ. 15ವರ್ಷದಲ್ಲಿ ಸುಮಾರು 2100 ಪ್ರಯೋಗಗಳು ಈ ಡೆಂಟಲ್ ಸಂಶೋಧನಾ ಕೇಂದ್ರದಲ್ಲಿ ನಡೆದಿದ್ದು, ರಾಷ್ಟ್ರದ ಅಂತರರಾಷ್ಟ್ರೀಯ ಮಹತ್ವ ಪಡೆದುಕೊಂಡಿದೆ ಎಂದರು. ಸಂಸ್ಥೆಯ ಸಹ ಮುಖ್ಯಸ್ಥ ನಾಗರಾಜ ಯಾದವ, ಡಾ. ಪ್ರಕಾಶ ದಿವಾನ, ಪ್ರಾಚಾರ್ಯ ಡಾ. ಭಟ್ ಇತರರು ಉಪಸ್ಥಿತರಿದ್ದರು.