SHARE

ಬೆಳಗಾವಿ: ಕಾಕತಿ ಗ್ರಾಮದಲ್ಲಿ ಶನಿವಾರ ಭಾರಿ ಗುಡುಗು ಮತ್ತು ಮಿಂಚಿನಿಂದ ಹೊಲದಲ್ಲಿದ್ದ ಮಹಿಳೆಗೆ ಸಿಡಿಲು ಬಡಿದು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕಾಕತಿ ಗ್ರಾಮದ ಸುಶೀಲಾ ಭಾವಕಣ್ಣಾ ಕೋಳಿ (37) ಮೃತರು. ಇವರು ಮನೆಯಿಂದ ಒಬ್ಬರೆ ಹೊಲದಲ್ಲಿ ಕೆಲಸಕ್ಕೆಂದು ಹೋಗಿದ್ದ ಇವರಿಗೆ ಕೆಲಸದಲ್ಲಿ ಮಗ್ನರಾದ ಸಮಯದಲ್ಲಿ ಸಿಡಿಲು ಬಡಿದು ಮೃತ ಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಾಕತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.