SHARE

ಬೆಳಗಾವಿ: 50ಸಾವಿರ ಮನೆಗಳ 34ಸಾವಿರ ಕುಟುಂಬಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ. ಈಗಾಗಲೇ ಒಟ್ಟು 115 ಕೋಟಿ ಹಣ ಸಂದಾಯವಾಗಿದೆ. ಮನೆಗಳಾದ ಕೆಟಗರಿ -1ಕ್ಕೆ ಮೊದಲ ಹಂತವಾಗಿ 1 ಲಕ್ಷ, ಕೆಟಗೆರಿ ಬಿ&ಸಿ- 25 ಸಾವಿರ ನೀಡಲಾಗುತ್ತಿದೆ ಎಂದು ಡಾ. ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.

ಅವರು ಇಂದು ಸುದ್ದಿಗೋಷ್ಠಿ ನಡೆಸಿ ₹2.21 ಲಕ್ಷ ಬೆಳೆ ಹಾನಿ ಸಂಭವಿಸಿದೆ. ಶಾಲೆಗಳ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ರೂ. ಗಳು ನೀಡಲಾಗುವುದು. ಒಟ್ಟು ₹167 ಕೋಟಿ ಅನುದಾನ ಪಡೆಯಲಾಗಿದೆ ಎಂದರು. ಮತದಾನದಲ್ಲಿ ಮತದಾರರಿಗೆ‌ ಆಗುವ ಗೊಂದಲ, ಮತದಾರ ಪಟ್ಟಿಯಿಂದ ಅರ್ಹ ಮತದಾರರು ಬಿಟ್ಟು ಹೋಗಬಾರದು ಎಂಬ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಶೀಲಿಸಿಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅಧಿಕಾರಿಗಳಿಗೆ ಸೂಚಿಸಿದರು.

ಎರಡು ದಿನ ಬಾಕಿ; ಮತದಾರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ಸೂಚನೆ: ಬೆಳಗಾವಿ ಜಿಲ್ಲೆಯ 18 ವಿಧಾನ ಸಭಾ ಮತಕ್ಷೇತ್ರಗಳ ಮತದಾರರ ಪರಿಶೀಲನಾ ಕಾರ್ಯಕ್ರಮ ಇನ್ನೂ ಮೂರು ದಿನ ಬಾಕಿ ಇದೆ‌. ಕೊನೆಯ ದಿನ ಅ.15 ಆಗಿದೆ. ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳಬೇಕು ಎಂದರು.