SHARE

ಬೆಳಗಾವಿ: ವಾರದೊಳಗೆ ನಗರದ ಎಲ್ಲ ಫ್ಲೆಕ್ಸ್, ಬ್ಯಾನರ್, ಬೋರ್ಡ್ಸ್ ತೆರವುಗೊಳಿಸಿ ನನಗೆ ವರದಿ ಮಾಡುವಂತೆ ಪ್ರಾದೇಶಿಕ ಆಯುಕ್ತ ಹಾಗೂ ಪಾಲಿಕೆ ಅಡ್ಮಿನಿಸ್ಟ್ರೇಟರ್ ಅಮ್ಲಾನ್ ಆದಿತ್ಯ ಬಿಸ್ವಾಸ ಪಾಲಿಕೆಗೆ ಸೂಚಿಸಿದ್ದಾರೆ.

ಇಂದು ಮಹಾನಗರ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ ಪಾಲಿಕೆಯ ಆಡಳಿತ ವೈಖರಿ ಹಾಗೂ ಸ್ಮಾರ್ಟ್ ಸಿಟಿ ಕೆಲಸದಲ್ಲಿ ಪಾಲಿಕೆ & ಸ್ಮಾರ್ಟ್ ಸಿಟಿ ಪರಸ್ಪರ ಸಹಕಾರ ಕುರಿತು ಸಭೆ ನಡೆಯಿತು. ಕಟ್ಟಡಗಳ ಅವಶೇಷ(Debris) ಡಿಸ್ಪೊಸಲ್ & ಡಿಸ್ಮ್ಯಾಂಟಲ್ ಯೋಜನಾ ಎಸ್ಟಿಮೇಶನನಲ್ಲಿ ಸೇರಿಸದ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಕಟ್ಟಡಗಳ ಅವಶೇಷಗಳಾದ ಕಬ್ಬಿಣ ಮತ್ತಿತರ ಅವಶೇಷಗಳನ್ನು ಆಯಾ ಗುತ್ತಿಗೆದಾರರೇ ಡಿಸ್ಪೋಸ್ ಮಾಡಬೇಕೆ ಹೊರತು, ಸ್ಥಳೀಯ ಆಡಳಿತಗಳು ಅದಕ್ಕೆ ತಮ್ಮ ಹೆಚ್ಚುವರಿ ಹಣ ವ್ಯಯ ಮಾಡತಕ್ಕದ್ದಲ್ಲ ಎಂದು ಸೂಚಿಸಿದರು. ಜನವಸತಿ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಕಟ್ಟಡಗಳ ಅವಶೇಷಗಳನ್ನು ಬಿಡತಕ್ಕದ್ದಲ್ಲ. ಅವಶೇಷಗಳನ್ನು ಗರಿಷ್ಠ 5ಕಿಮೀ ವರೆಗೆ ಆಯಾ ಗುತ್ತಿಗೆದಾರರೇ ಬಿಟ್ಟಿಬರಬೇಕು. 5ಕಿಮೀ ಆಚೆಗೆ ಬೇಕಾದರೆ ಸ್ಥಳೀಯ ಆಡಳಿತ ಹಣ ಪಾವತಿಸಬಹುದು ಎಂದರು.

Shifting of utility project estimation ನಲ್ಲಿ ಇರಬೇಕಿರುವುದು ಕಡ್ಡಾಯ ಎಂದು ಬಿಸ್ವಾಸ್ ಒತ್ತಿ ಹೇಳಿದರು. ಗುತ್ತಿಗೆ ಕೆಲಸ ಹಿಡಿದು ಬರುವ ಉತ್ತರ ಭಾರತದ ಕಂಟ್ರಾಕ್ಟರ್ ಗಳಿಗೆ ಬಹಳ ಮಾರ್ಜಿನ್ ಇದೆ ಎಂದು ಅರ್ಥಗರ್ಭಿತ ವ್ಯಂಗ್ಯ ವ್ಯಾಖ್ಯಾನ ಮಾಡಿದರು. ಸರಕಾರಿ ಅಧಿಕಾರಿಗಳು we are not person, we are ‘post’ ಎಂದು ಅಧಿಕಾರಿಗಳಿಗೆ ತಮ್ಮ ಜವಾಬ್ದಾರಿ ಮತ್ತು ಅಧಿಕಾರ ನಿಶ್ಚಳವಾಗಿ ಬಳಸಬೇಕಾದ ಪಾಠ ಮಾಡಿದರು. ನಮ್ಮ ಹಿಂದಿನ ಅಧಿಕಾರಿಗಳು ಯೋಜನೆ ಮಾಡುವಾಗ ತಪ್ಪು(Errors) ಮಾಡಿದರೆಂದು ಅದನ್ನೇ ಪ್ರಸ್ತುತ ಅಧಿಕಾರಿ ಯಾಕೆ ಮುಂದುವರೆಸಬೇಕು, project errors ಉನ್ನತಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು, ಯಥಾ ಕಾನಾನೂ, ತಥಾ ಆಡಳಿತ ನಡೆಯಬೇಕು ಎಂದು ಬಿಸ್ವಾಸ್ ಎಚ್ಚರಿಸಿದ್ದಾರೆ.

ಸ್ಮಾರ್ಟ್ ಸಿಟಿ ಅಧಿಕಾರಿಗಳು ಬೆಳಗಾವಿ ನಗರದ ಹಿರಿಯರು, ತಜ್ಞರು, ಮಾಧ್ಯಮಗಳು ಸೇರಿ ಎಲ್ಲ ಜವಾಬ್ದಾರಿಯುತ ನಾಗರಿಕರ ಅಭಿಪ್ರಾಯ ಸಂಗ್ರಹಿಸಿಕೊಳ್ಳಬೇಕು. ಪ್ರತಿ ಪರಿಶೀಲನೆ ವೇಳೆ ಕಂದಾಯ ಇಲಾಖೆಯ ತಲಾಠಿ, ಪೊಲೀಸ್ ಇಲಾಖೆಯ ಕಾನ್ಸಟೇಬಲ್, ಪಾಲಿಕೆ ವರ್ಕ್ ಇನ್ಸಪೆಕ್ಟರ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಕೆಳಹಂತದ ನೌಕರರನ್ನು ಜೊತೆಗೆ ಕರೆದೊಯ್ಯಬೇಕು ಎಂದು ಸೂಚಿಸಿದರು. ಸ್ಥಳೀಯ ಅಭಿವೃದ್ಧಿ ಯೋಜನೆಗಳನ್ನು ಮಾಡುವಾಗ Be practical & Do practice ಎಂದು ಸ್ನಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದರು. ಮಹಾನಗರ ಪಾಲಿಕೆ ಆಯುಕ್ತರಿಗೆ ಅಪರಿಮಿತ ಅಧಿಕಾರಗಳಿವೆ. ನಿವೇಕೆ ಮುದುಡಿ ಕೆಲಸ ಮಾಡುತ್ತೀರಿ ಎಂದು ಆಯುಕ್ತ ಜಗದೀಶ ಕೆ. ಎಚ್. ಅವರನ್ನು ತರಾಟೆಗೆ ತೆಗೆದುಕೊಂಡರು. ಯೂಸ್ ಯುವರ್ ಪಾವರ್ಸ್ ಭಾಯ್.. ಹಿಂದೆ ನಾನಿದ್ದೇನೆ ಎಂದು ಬಿಸ್ವಾಸ್ ಸೂಚಿಸಿದ್ದಾರೆ. ಹತ್ತು ಹಲವು ನ್ಯೂನ್ಯತೆ ಕಂಡು ಹಿಡಿದ ಅವರು ಸರಿಪಡಿಸಿಕೊಳ್ಳಲು ಸೂಚಿಸಿದರು. ಅಧಿಕಾರಿಗಳು ಸ್ಮಾರ್ಟ್ ಸಿಟಿ ಎಂಡಿ ಶಿರಿನ್ ನದಾಫ್, ಕಂದಾಯ ಉಪ ಆಯುಕ್ತ ದೊಡ್ಡಗೌಡರ ಆರೋಗ್ಯಾಧಿಕಾರಿ ಡಾ. ಸಂಜಯ ಡುಮ್ಮಗೋಳ ಇತರರು ಉಪಸ್ಥಿತರಿದ್ದರು.