SHARE

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಯಾಗಿ ಹಿರಿಯ ವೈದ್ಯಾಧಿಕಾರಿ ಡಾ. ಸಂಜಯ ಡುಮ್ಮಗೋಳ ಅಧಿಕಾರ ವಹಿಸಿಕೊಂಡಿದ್ದಾರೆ. ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಆಗಿದ್ದ ಡಾ. ಶಶಿಧರ ನಾಡಗೌಡ ಅವರು ಮಾತೃ ಇಲಾಖೆಗೆ ಮರಳಿದ್ದಾರೆ. ಡಿಪ್ಲೋಮಾ & ಪಬ್ಲಿಕ್ ಹೆಲ್ತ್ ವಿಭಾಗದಲ್ಲಿ ತಜ್ಞರಾದ ಡಾ. ಸಂಜಯ ಇನ್ಮುಂದೆ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗ ಮುನ್ನಡೆಸಲಿದ್ದಾರೆ.

ಅಥಣಿ, ಖಾನಾಪುರ ಹಾಗೂ ಬೆಳಗಾವಿ ತಾಲೂಕುಗಳಲ್ಲಿ ಆರೋಗ್ಯಾಧಿಕಾರಿಯಾಗಿ ಡಾ. ಡುಮ್ಮಗೋಳ ಸೇವೆ ಸಲ್ಲಿಸಿದ್ದು, ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಆದೇಶದ ಮೇರೆಗೆ ಆರೋಗ್ಯಾಧಿಕಾರಿಗಳ ಬದಲಾವಣೆ ಆಗಿರುವ ಮಾಹಿತಿ ಲಭ್ಯವಾಗಿದೆ. Waste Management, Vector Bond Deceases, Water Bond Deceases, ಹೊಟೇಲುಗಳ ಸ್ವಚ್ಛತೆ, ಸೊಳ್ಳೆ ನಿಯಂತ್ರಣ ವಿಷಯಗಳ ಮೇಲೆ ಪ್ರಥಮಾಧ್ಯತೆ ನೀಡಿ ಮಹಾನಗರ ಜನತೆಗೆ ಪರಿಣಾಮಕಾರಿ ಆರೋಗ್ಯ ಸೇವೆ ನೀಡುವುದಾಗಿ ಡಾ. ಸಂಜಯ ಡುಮ್ಮಗೋಳ ತಿಳಿಸಿದ್ದಾರೆ. ಬೆಳಗಾವಿ ತಾಲೂಕು ಆರೋಗ್ಯಾಧಿಕಾರಿ ಜೊತೆಗೆ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಹುದ್ದೆ ಡಾ. ಸಂಜಯ ನಿಭಾಯಿಸಲಿದ್ದಾರೆ.