SHARE

ಬೆಳಗಾವಿ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ ಹೈನೋದ್ಯಮ ಸೇರಿಸದಂತೆ ಹೈನುದಾರರು ಹಾಗೂ KMF ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಣ್ಣರೈತರು, ಭೂರಹಿತರು, ಬಡವರು ಹೈನೋದ್ಯಮದ ಮೇಲೆ ಬದುಕುತ್ತಿದ್ದಾರೆ. ಕೇಂದ್ರ ಸರಕಾರದ RCEP ಯೋಜನೆ ಹೈನೋದ್ಯಮವನ್ನು ಹಾಳು ಮಾಡಲಿದೆ ಎಂದು ಸಾವಿರಾರು ಪ್ರತಿಭಟನಾಕಾರರು ರಸ್ತೆಯಲ್ಲಿ ಹಾಲು ಸುರಿದು ಪ್ರತಿಭಟನೆ ನಡೆಸಿದರು. ವಿದೇಶಿ ಹಾಲು ಭಾರತೀಯ ಮಾರುಕಟ್ಟೆಗೆ ಬರತಕ್ಕದ್ದಲ್ಲ ಎಂದು ಎಂಎಲ್ ಎಸ್ ಹಾಗೂ ಕೆಎಂಎಫ್ ಅಧ್ಯಕ್ಷ ವಿವೇಕರಾವ ಪಾಟೀಲ ನೇತೃತ್ವದಲ್ಲಿ ಪ್ರತಿಭಟಿಸಿ ಎಡಿಸಿ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು.