SHARE

ಅಥಣಿ: ಬುಧವಾರ ರಂದು ಜಿಲ್ಲಾ ಪಂಚಾಯತ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಅಥಣಿ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೋಳೆ ಜಿಲ್ಲಾ ಪಂಚಾಯತ ಸದಸ್ಯರಾದ ಪುಟ್ಟರಾಜಮ್ಮ ತುಗಶೆಟ್ಟಿಯವರು ಸಭೆಗೆ ಗೈರು ಹಾಜರಿದ್ದ ಕಾರಣ ಅವರ ಪತಿಯು ಅಧಿಕಾರಿಗಳ ಮೇಲೆ ಅಧಿಕಾರ ಚಲಾಯಿಸಿದ್ದಾರೆ. ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ಸಭೆ ನಡೆಸಿದ್ದಲ್ಲದೇ ತಾವೊಬ್ಬ ಜನಪ್ರತಿನಿಧಿ ಅಲ್ಲದೇ ಇದ್ದರೂ ಕೂಡಾ ಈ ರೀತಿ ಹೆಂಡತಿ ಚಲಾಯಿಸಬೇಕಾದ ಅಧಿಕಾರ ಪತಿ ಚಲಾಯಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಪಂಚಾಯತ ಅಧ್ಯಕ್ಷರ ಸಮ್ಮುಖದಲ್ಲೇ ನಡೆಯುತ್ತಿದ್ದರೂ ಕೂಡಾ ಸರಕಾರಿ ಸಭೆಯಲ್ಲಿ ಅಧ್ಯಕ್ಷರ ಆಸನದ ಪಕ್ಕ ಕುಳಿತು ಅಗೌರವ ತೋರಿದ್ದಾರೆ. ಸರಕಾರಿ ಸಭೆಯಲ್ಲಿ ಭಾಗವಹಿಸಲು ಖಾಸಗಿ ಅದರಲ್ಲೂ ಮೇಲಾಗಿ ಯಾವುದೇ ಪಕ್ಷದ ರಾಜಕೀಯ ಮುಖಂಡರಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಆದರೆ ಅವೆಲ್ಲವೂಗಳಿಗೆ ಕ್ಯಾರೇ ಅನ್ನದೇ ಅಧಿಕಾರಿಗಳಿಗೆ ಪ್ರಶ್ನೆ ಮಾಡಿ ಅವರ ಮೇಲೆ ವಿನಾಕಾರಣ ದರ್ಪ ತೋರಿದ್ದಾರೆ.

ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ ಐಹೊಳೆ ತಾಲೂಕಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನವರ ಸೇರಿದಂತೆ ಹಿರಿಯ ಅಧಿಕಾರಿಗಳು ರಾಜಕೀಯ ಮುಖಂಡ ಶ್ರೀಶೈಲ್ ತುಗಶೆಟ್ಟಿ ಅವರ ವರ್ತನೆಯಿಂದ ಮುಜುಗರಕ್ಕೊಳಗಾಗಿ ಮೂಕವಿಸ್ಮಿತರಾದರು. ಒಬ್ಬ ರಾಜಕೀಯ ಮುಖಂಡ ಜನಪ್ರತಿನಿಧಿ ಅಲ್ಲದವರು ಈ ರೀತಿಯ ವರ್ತನೆ ಆಡಳಿತದ ಮೇಲೆ ಪರಿಣಾಮ ಬೀಳುತ್ತದೆ ಹಾಗೂ ಸರ್ಕಾರಿ ಸಭೆಗಳು ಬೆಲೆಯಿಲ್ಲದಂತಾಗುತ್ತವೆ ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂದ್ದಲ್ಲದೆ ಸಂಬಂಧಪಟ್ಟವರು ಇವರ ಮೇಲೆ ಕ್ರಮ ಜರುಗಿಸಬೇಕೆಂದು ಸಾರ್ವಜನಿಕ ವಲಯದಲ್ಲಿ ಬಲವಾದ ಮಾತುಗಳು ಹರಿದಾಡುತ್ತಿವೆ.