SHARE

ಬೆಳಗಾವಿ: ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ನೈಜ ಸಂತ್ರಸ್ತರ ಬದಲಾಗಿ ರಾಜಕೀಯ ಪುಢಾರಿಗಳು & ಭುಜಬಲ ಪರಾಕ್ರಮಿಗಳಿಗೆ ಪರಿಹಾರ ತಲುಪುತ್ತಿದೆ ಎಂಬುವುದು ಗಮನ ಸೆಳೆದಿದೆ. ಇಂದು ನಡೆದ ಜಿಪಂ. ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಮನೆ ಪರಿಹಾರ ಒದಗಿಸುವಲ್ಲಿ ನಿಜವಾದ ಬಡವರಿಗೆ A&B ಕೆಟಗೆರೆ ಮನೆ ಪರಿಹಾರ ಸಿಗುತ್ತಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಎಂಜಿನೀಯರ್, ಪಿಡಿಓ ಮತ್ತು ತಲಾಠಿಗಳು ಸೇರಿ ನಿಜವಾದ ಪ್ರವಾಹ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡಲು ಪ್ರಯತ್ನ ಮಾಡುತ್ತಿಲ್ಲ. ಸರ್ವೇ ಸರಿಯಾಗಿ ನಡೆಯುತ್ತಿಲ್ಲ. ರಾಜಕೀಯ ಬೆಂಬಲಿತರು ಹಾಗೂ ಒತ್ತಡ ತಂತ್ರದ ಬಲಾಢ್ಯರು ₹5(A) ಲಕ್ಷ ಪರಿಹಾರಕ್ಕೆ ಗುರುತಿಸಿಕೊಂಡು ಪಡೆಯುತ್ತಿದ್ದಾರೆ. ನಿಜವಾಗಿ ಮನೆ ಬಿದ್ದ ಸಂತ್ರಸ್ತರಿಗೆ ₹25ಸಾವಿರ ಕೊಟ್ಟು ಇಲ್ಲವೇ ಸರ್ವೇಯಲ್ಲಿ ಸೇರಿಸಿಕೊಳ್ಳದೇಯೇ ಬಿಟ್ಟುಬಿಡುವ ಹುನ್ನಾರ ನಡೆದಿದೆ. ‌ಮಳೆ‌ ಇಲ್ಲವೇ ನೆರೆಗೆ ತಾಗದೇ ಇರುವ ಆರ್ ಸಿಸಿ ಕಟ್ಟಡ ಹೊಂದಿದ ಬಲಾಢ್ಯರೂ ಸಹ ‘ಎ’ ಕೆಟಗೆರಿಯಲ್ಲಿ ಪರಿಹಾರ ಪಡೆಯಲು ಆಯ್ಕೆಯಾಗಿರುವುದು ಹೇಗೆ ಎಂದು ಜಿಪಂ. ಅಧ್ಯಕ್ಷರು ಹಾಗೂ ಸಿಇಓ ಅವರ ವಿರುದ್ಧ ಸಭೆಯ ಉದ್ದಕ್ಕೂ ಅಸಮಧಾನ ವ್ಯಕ್ತಪಡಿಸಿದರು.

ವಿಳಂಬ: ಜಿಪಂ. ಸಭೆ ಪ್ರಾರಂಭದಲ್ಲಿ ಕೋರಂ ಕೊರತೆಯಿಂದ ತೀವ್ರ ಗದ್ದಲದ ನಂತರ ಕೋರಂ ತುಂಬಿಕೊಂಡು ಮಧ್ಯಾಹ್ನ 1ಕ್ಕೆ ಪ್ರಾರಂಭವಾಯಿತು.