SHARE

ಬೆಳಗಾವಿ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(RCEP) ಒಡಂಬಡಿಕೆಯನ್ನು ಕೇಂದ್ರ ತತಕ್ಷಣ ಕೈ ಬಿಡಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ಸ್ಥಳೀಯ ರೈತರು ಮತ್ತು ಗುಡಿ ಕೈಗಾರಿಕೆ ಹಾಗೂ ಹೈನುಗಾರಿಕೆಗೆ ಪೆಟ್ಟು ತರುವ ಒಡಂಬಡಿಕೆ ಮಾತುಕತೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಸುಂಕರಹಿತ ಸಾಗರೋತ್ತರ ಉತ್ಪನ್ನಗಳನ್ನು ದೇಶದೊಳಕ್ಕೆ ಬಿಟ್ಟುಕೊಳ್ಳುವ ಕೇಂದ್ರದ ನಿರ್ಧಾರ ಸ್ವಹಿತಕ್ಕೆ ಮಾರಕ ಎಂದರು. ಚೂನಪ್ಪ ಪೂಜೇರಿ, ಜಯಶ್ರೀ ಬಡಗ್ನವರ ಸೇರಿ ಹಲವಾರು ರೈತರು ಮುಖ್ಯಮಂತ್ರಿ ಹಾಗೂ ಕೃಷಿ- ಕಂದಾಯ ಸಚಿವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ರವಾಣಿಸಿದರು.