SHARE

ಬೆಳಗಾವಿ: ನಗರದ ಹಿಂದವಾಡಿ ಆರ್ ಪಿಡಿ ಸಮೀಪದ ಪ್ರದೇಶದಲ್ಲಿ ‘ಸ್ಮಾರ್ಟ್’ ಸರಾಫ್ ಪಾರ್ಕ್ 0.31ಎಕರೆ ಪ್ರದೇಶದಲ್ಲಿ ₹82.67 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ರೂಫ್ ಏರಿಯಾ, ಸಾಫ್ಟ್ ಸ್ಕೇಪ್, ಹಾರ್ಡ್ ಸ್ಕೇಪ್, ಸ್ವಿಂಗ್, ಮೆರ್ರಿ ಗೊ ರೌಂಡ್, ಪ್ಲೇ ಇಕ್ಯೂಪಮೆಂಟ್, ಟ್ರಿ ಹೌಸ್, ಎಂಬಾಕಮೆಂಟ್/ ಸ್ಟೆಪ್ಸ್, ಲ್ಯಾಂಡಸ್ಕೇಪ್ ಸ್ಟೆಪಿಂಗ್, ಕಡಪಾ ಸ್ಟೋನ್ ಸ್ಟೆಪಿಂಗ್, 200ಮಿಮಿ ದಪ್ಪ ಬೌಂಡರಿ ವಾಲ್ ಸೇರಿದಂತೆ ಇತರ ಸೌಲಭ್ಯಗಳು ಇರಲಿವೆ.

ಮನಸೆಳೆಯುವ ಡಿಸೈನ್ ಮತ್ತು ವ್ಯವಸ್ಥೆ ಸರಾಫ್ ಪಾರ್ಕ್ ಗೆ ಜಾಗತಿಕ ಗುಣಮಟ್ಟ ತಂದುಕೊಡುವ ಯತ್ನ ಸ್ಮಾರ್ಟ್ ಲಿಮಿಟೆಡ್ ಮಾಡಲಿದೆ ಎಂದು ಎಂಡಿ ಶಶಿಧರ ಕುರೇರ ಹಾಗೂ ಪರಿಸರ ಅಭಿಯಂತ ಉದಯಕುಮಾರ ಬಿ. ಟಿ. ಹರ್ಷ ವ್ಯಕ್ತ ಪಡಿಸಿದ್ದಾರೆ. ದಕ್ಷಿಣ ಶಾಸಕ ಅಭಯ ಪಾಟೀಲ ಈಗಾಗಲೇ ಚಾಲನೆ ನೀಡಿದ್ದು, ಕಾಮಗಾರಿ ಭರದಿಂದ ಸಾಗಿದೆ.