SHARE

ಬೆಳಗಾವಿ: ಕೆಎಟಿ ಪ್ರಮುಖ ವಿಚಾರಣೆಗಳನ್ನು ಬೆಳಗಾವಿ & ಕಲಬುರಗಿ ಪೀಠದಿಂದ ಬೆಂಗಳೂರಿಗೆ ವರ್ಗಾಯಿಸಿದ ಕ್ರಮ ಖಂಡಿಸಿ ಎರಡನೇ ದಿನ ಇಂದು ಕೋರ್ಟ್ ಕಲಾಪ ಬಹಿಷ್ಕರಿಸಲಾಗಿದೆ. ಗುರುವಾರ ಪ್ರತಿಭಟನೆ ನಡೆಸಿ ಕೋರ್ಟ್ ಕಲಾಪ ಬಹಿಷ್ಕರಿಸಿದ್ದ ಜಿಲ್ಲಾ ವಕೀಲರು ಇಂದೂ ಸಹ ಮುಂದುವರೆಸಿದರು. ಬಾರ್ ಅಸೊಸಿಯೇಷನ್ ಗೆ ಬೆಂಬಲುಸಿ ಬೆಳಗಾವಿ ದಕ್ಷಿಣ ಹಾಗೂ ಉತ್ತರ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿದರು. ರಾಜ್ಯ ಸರಕಾರ ಸದರಿ ಸಮಸ್ಯೆಯನ್ನು ಮಧ್ಯಪ್ರವೇಶಿಸಿ ಬಗೆಹರಿಸಬೇಕು. ಬೆಳಗಾವಿ- ಕಲಬುರಗಿ ಕೆಎಟಿ ಪ್ರಕರಣಗಳ ವಿಚಾರಣೆಗೆ ಬೆಂಗಳೂರಿಗೆ ಹೋಗುವುದು ಆಗದು ಎಂದು ಆಕ್ಷೇಪ ವ್ಯಕ್ತಪಡಿಸಿದರು.