SHARE

ಬೆಂಗಳೂರು: ಕೈರಾ ಸೈಕ್ಲೋನ್ ಇಂದಿನಿಂದ‌ ಕೊಂಕನದತ್ತ ಚಲಿಸಲಿದ್ದು, ಮುಂದಿನ 4ದಿನ ವಿಪರೀತ ಮಳೆ ಹುಯ್ಯಲಿದೆ.
ಗೋವಾ, ಕಾರವಾರ ಮತ್ತು ರತ್ನಾಗಿರಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆ ಅ. 26ರವರೆಗೆ ಬೀಳುವ ಮುನ್ಸೂಚನೆ ನೀಡಲಾಗಿದ್ದು, ಅ. 30ರ ವೇಳೆಗೆ ಗೋವಾ, ಕೊಂಕನ ತೀರ, ಕೊಲ್ಲಾಪುರ, ರತ್ನಾಗಿರಿ, ಪುನೆ, ಸತಾರಾ ಮುಂಬಯಿ ಪ್ರದೇಶದಲ್ಲಿ ಭಾರಿ ಮಳೆ ಹೊಡೆಯಲಿದೆ.

ಮುಂದಿನ 8ದಿನಗಳಲ್ಲಿ ಕೊಂಕನ ತೀರ, ಗೋವಾ, ಗೋಕರ್ಣ, ಮುಂಬಯಿ ಸೇರಿ ಇತರ ಪ್ರದೇಶಗಳಿಗೆ ಪ್ರವಾಸಿಗರು ತೆರಳದೇ ಸುರಕ್ಷಿತವಾಗಿರುವ ಸೂಚನೆ ನೀಡಲಾಗಿದೆ. ದಿಯು- ದಮನ ನಿಂದ ಮಂಗಳೂರಿನವರೆಗೆ ಕೊಂಕನ ತೀರದ ಜನತೆ ಜಾಗೃತೆ ವಹಿಸಬೇಕಿರುವುದು ಹವಾಮಾನ ಮುನ್ಸೂಚನೆ ವರದಿಯಿಂದ ಬಯಲಾಗಿದೆ.
ಕೊಂಕನ ತೀರದ ಭಾರಿ ಮಳೆಯಿಂದ ರೈಲ್ವೇ ಸೇವೆಗೂ ಲ್ಯಾಂಡಸ್ಲೈಡಿಂಗ್ ಭಯವಾಗಿದ್ದು, ಸೇವೆ ವ್ಯತ್ಯಯವಾಗುವ ನಿರೀಕ್ಷೆಯಿಂದ ರೈಲ್ವೇ ಇಲಾಖೆ ಅಗತ್ಯ ಜಾಗೃತೆ ವಹಿಸಿದೆ.