SHARE

ಬೆಳಗಾವಿ: ಅಥಣಿ & ಗೋಕಾಕ ಕ್ಷೇತ್ರದಿಂದ ಉಪಚುನಾವಣೆಗೆ ಟಿಕೇಟ್ ನೀಡುವಂತೆ ಆಕಾಂಕ್ಷಿಗಳು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಅಥಣಿಯಿಂದ ಸದಾಶಿವ ಬುಟಾಳೆ ಹಾಗೂ ಗೋಕಾಕದಿಂದ ಬಾಲಾಜಿ ಸಾವಳಗಿ ಕಾಂಗ್ರೆಸ್ ಟಿಕೇಟ್ ತಮಗೇ ಬೇಕು ಎಂದು ಹಠ ಹಿಡಿದರು. ಕಾಂಗ್ರೆಸ್ ನಿಂದ ಬೇರೆ ಯಾರಿಗೂ ಟಿಕೇಟ್ ಕೊಡತಕ್ಕದ್ದಲ್ಲ ನಮಗೇ ಕೊಡಬೇಕು ಎಂದು ಸಿದ್ದರಾಮಯ್ಯ ಭೇಟಿ ಆಗಿ ಹೊರಬಂದು ಮಾಧ್ಯಮಗಳೆದುರು ಒತ್ತಾಯಿಸಿದರು.
ಬೆಳಗಾವಿ ಸರ್ಕ್ಯೂಟ್ ಹೌಸನಲ್ಲಿ ನಿನ್ನೆ ತಂಗಿದ್ದ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಜಮಖಂಡಿಯತ್ತ ಪ್ರಯಾಣ ಬೆಳೆಸಿದರು. ಮಾಜಿ ಶಾಸಕ ಫಿರೋಜ ಸೇಠ್ ಜೊತೆಗಿದ್ದರು.