SHARE

ಬೆಳಗಾವಿ: ವಸತಿ ಸಚಿವ ವಿ. ಸೋಮಣ್ಞ ಇಂದು ನಗರದ ದೇವರಾಜ ಅರಸ್ ಕಾಲನಿ ಕೆಎಚಬಿ ಹಾಗೂ ಇತರ ಪ್ರದೇಶಗಳ ಪರಿಶೀಲನೆ ನಡೆಸಿದರು. ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿದ ಅವರು ವಸತಿ ಸಮಸ್ಯೆ ಹಾಗೂ ವಸತಿ ಯೋಜನೆಗಳ ಜಾರಿ ಬಗ್ಗೆ ಪರಿಶೀಲನೆ ನಡೆಸಿದರು.

ನಗರದ ಪಾಟೀಲ ಗಲ್ಲಿ, ಕಪಿಲೇಶದವರ ಮಾರ್ಗದಲ್ಲಿ ಸಂಚರಿಸಿದರು. ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ, ಶಾಸಕ ಅನಿಲ ಬೆನಕೆ, ವಿಧಾನಪರಿಷತ್ ಸದಸ್ಯ ಮಹಾಂತೇಷ ಕವಟಗಿಮಠ, ಪಾಲಿಕೆ ಆಯುಕ್ತ ಜಗದೀಶ ಕೆ. ಎಚ್., ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಇತರರು ಭಾಗವಹಿಸಿದರು.