SHARE

ಬೆಳಗಾವಿ/ಸವದತ್ತಿ: ಸೆಲ್ಫಿ ಗೀಳಿಗೆ ತನ್ನ ಜಾಗೃತೆ ಮರೆತ ವ್ಯಕ್ತಿ ಸವದತ್ತಿಯ ಕೋಟೆ ಮೇಲಿಂದ ಬಿದ್ದು ಅಸುನೀಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸವದತ್ತಿ ತಾಲೂಕು ರಾಮಾಪುರದ ಶಿವಾನಂದ ಪವಾರ(೨೫) ಮೃತ ಯುವಕ. ಸೋಮವಾರ ಸಂಜೆ ಸೆಲ್ಫಿ ಫೋಟೊ ಕ್ಲಿಕ್ಕಿಸಲು ಹೋಗಿ ಆಯಾ ತಪ್ಪಿದ ಯುವಕ ಸುಮಾರು ೮೦ ಅಡಿಯಿಂದ ಬಿದ್ದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸವದತ್ತಿ ಪೊಲೀಸರು ಪರಿಶೀಲಿಸಿದರು.