SHARE

ಬೆಳಗಾವಿ: ವಿಶ್ವ ಮಾಧವ ಮಹಾ ಪರಿಷದ್ ಹಾಗೂ ಶ್ರೀ ಸತ್ಯಪ್ರಮೋದತೀರ್ಥ 23ನೇ ಪಾದುಕಾ ಮಹಾಸಮಾರಾಧನಾ ಮಹೋತ್ಸವ ಸಮ್ಮೇಳನ ನ. 10ರಿಂದ 17ರವರೆಗೆ ನಡೆಯಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಮಿತಿಯ ಗೌರವಾಧ್ಯಕ್ಷ ಅನಿಲ ಪೋತದಾರ ಬೆಳಗಾವಿಯಲ್ಲಿ ವಿದ್ವಾಂಸರು, ಪಂಡಿತರು, ಧಾರ್ಮಿಕ & ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದು, ಈ ಸಂಬಂಧ ನ. 10ರಿಂದ 13ರವರೆಗೆ ಧಾರ್ಮಿಕ ಪರೀಕ್ಷೆಗಳು ನಡೆಯಲಿವೆ. ನ. 14ರಿಂದ 17ರವರೆಗೆ ವಿಚಾರಗೋಷ್ಠಿ, ವ್ಯಾಸ ಸಾಹಿತ್ಯ, ದಾಶಾಹಿತ್ಯ, ಪ್ರವಚನ, ವಿವಿಧ ಹೋಮ ಹಮ್ಮಿಕೊಳ್ಳಲಾಗಿದೆ. ಎಂಟು ದಿನದ ಕಾರ್ಯಕ್ರಮದಲ್ಲಿ ದೇಶದ ಎಲ್ಲ ವಿದ್ವಾಂಸರು, ಭಕ್ತಾದಿಗಳು, ಗುರುಗಳ ಸೇವೆ ಹಾಗೂ ಶ್ರೀಮೂಲ ರಾಮದೇವರ ದರ್ಶನಕ್ಕರ ಬರಲಿದ್ದಾರೆ ಎಂದರು. ನಗರದ ಬಿ. ಕೆ. ಮಾಡೆಲ್ ಶಾಲಾ ಆವರಣದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಆರ್. ಎಸ್. ಜಕಾತಿ, ಶ್ರೀಧರ ಹುಕ್ಕೇರಿ ಇತರರು ಉಪಸ್ಥಿತರಿದ್ದರು.