SHARE

ಬೆಳಗಾವಿ: ರಾಜ್ಯದ ಐವರು ಹಿರಿಯ ಹೈಕೋರ್ಟ್
ನ್ಯಾಯವಾದಿಗಳಿಗೆ ಕೇಂದ್ರ ಸರಕಾರ ಹೈಕೋರ್ಟ್ ನ್ಯಾಯಾಧೀಶರಾಗಿ ಅಧಿಸೂಚಿಸಿ ಆದೇಶ ಹೊರಡಿಸಿದೆ. ಹೇಮಂತ ಚಂದನಗೌಡರ ನೇರನಹಳ್ಳಿ, ಶ್ರೀನಿವಾಸನ ಸಂಜಯ ಗೌಡ, ಮಿಸ್ ಜ್ಯೋತಿ ಮೂಲಿಮನಿ, ನಟರಾಜ ರಂಗಸ್ವಾಮಿ, ಪ್ರದೀಪಸಿಂಗ್ ಯೆರೂರ ಅವರನ್ನು ಹೆಚ್ಚುವರಿ ಹೈಕೋರ್ಟ್ ಜಡ್ಜಗಳಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.