SHARE

ಬೆಳಗಾವಿ: ಅಂತಾರಾಷ್ಟ್ರೀಯ ಚಿತ್ರಕಲಾಕಾರ ವಿಕಾಸ ಪಾಟನೇಕರ ಅವರು ಬರೆದ ಚಿತ್ರಗಳ ಪ್ರದರ್ಶನ ನ. 9ರಂದು ನಗರದ ಮಹಾವೀರ ಭವನ ಆರ್ಟಗ್ಯಾಲರಿಯಲ್ಲಿ ನಡೆಯಲಿದೆ. ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಚಿತ್ರಪ್ರದರ್ಶನ ಉದ್ಘಾಟಿಸುವರು, ಛಾಯಾಚಿತ್ರಗಾರ ಯೋಗಿ ಬಿರಾದಾರ, ಡಾ. ಸೋನಾಲಿ ಸರನೋಬತ್ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಬೆಳಗಾವಿ ನಗರದ ಸರ್ವ ನಾಗರಿಕರಿಗೆ ಉಚಿತವಾಗಿ ಪ್ರದರ್ಶನ ವೀಕ್ಷಿಸುವ ಅವಕಾಶವಿದೆ, ನಾನು ಬರೆದ ಚಿತ್ರಗಳನ್ನು ಇಷ್ಟಪಟ್ಟು ಖರೀದಿಸುವವರು ಖರೀದಿಸಬಹುದು ಎಂದರು. ವಾಟರ್ ಕಲರ್ ಹೊಂದಿದ ಲ್ಯಾಂಡಸ್ಕೇಪ್ ಮಾದರಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ವಿಲಾಸ ಅಧ್ಯಾಪಕ, ಯೋಗಿ ಬಿರಾದಾರ ಇತರರು ಉಪಸ್ಥಿತರಿದ್ದರು.