SHARE

ಬೆಳಗಾವಿ: ೪ ವರ್ಷಗಳ ಹಿಂದೆಯೇ ಭಾರತೀಯ ಸೈನ್ಯ ಸೇರಿದ್ದ ಬೆಳಗಾವಿಯ ಯೋಧ ರಾಹುಲ ಸುಳಗೇಕರ (೨೨) ಹುತಾತ್ಮನಾಗಿದ್ದಾನೆ. ಉಚಗಾಂವ ಗ್ರಾಮದ ಈ ವೀರ ಯೋಧ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹೋರಾಡಿ ಸಾವನ್ನಪ್ಪಿದ್ದಾನೆ. ರಾಹುಲ್, ಗಣೇಶ ಉತ್ಸವ ವೇಳೆ ತವರಿಗೆ ಬಂದಿದ್ದರು.‌

ಜಮ್ಮುವಿನ ಪುಂಚ್ ಬಳಿ ಭಯೋತ್ಪಾದಕರೊಂದಿಗೆ ಸೆಣಸಾಡುವಾಗ ಗುಂಡು ತಗುಲಿ ಹುತಾತ್ಮನಾಗಿದ್ದಾನೆ. ರಾಹುಲ್ ಅಣ್ಣ ಮಯೂರ ಕೂಡ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಹುಲ್‌ನ ತಂದೆ ಸಹ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತನ್ನ ಇಬ್ಬರೂ ಮಕ್ಕಳನ್ನೂ ಸೇನೆಗೆ ಸೇರಿಸಿ ತಂದೆ ಭೈರು ಸುಳಗೇಕರ‌ ದೇಶಾಭಿಮಾನ ಮೆರೆದಿದ್ದಾರೆ.

ಉಚಗಾಂವಗೆ ಶುಕ್ರವಾರ ಸಂಜೆ ಯೋಧನ ಪಾರ್ಥಿವ ಶರೀರ ಆಗಮಿಸುವ ಸಾಧ್ಯತೆ ಇದ್ದು, ಅಂತಿಮ ಸಂಸ್ಕಾರ ಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕು‍ಟುಂಬ ಮೂಲಗಳು ತಿಳಿಸಿವೆ.