SHARE

ಬೆಳಗಾವಿ: ಅಯೋಧ್ಯಾ ಪ್ರಕರಣದ ತೀರ್ಪು ಸುಪ್ರೀಂಕೋರ್ಟಿನಿಂದ ಹೊರಬೀಳಲಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಪೂರ್ವಭಾವಿ ಸಭೆ ನಡೆಸಿತು. ನಗರದ ಜಿಪಂ. ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಹಾಗೂ ಪೊಲೀಸ್ ಆಯುಕ್ತ ಬಿ. ಎಸ್. ಲೊಕೇಶಕುಮಾರ ನೇತೃತ್ವದಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು. ನಗರದ ಪೊಲೀಸ್ ಅಧಿಕಾರಿಗಳು, ಸಮಾಜದ ಮುಖಂಡರು, ಸಿವಿಲ್ ಅಧಿಕಾರಿಗಳು ಸಭೆಯಲ್ಲಿಹಣ ಭಾಗವಹಿಸಿದರು. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಮಾಲೋಚನೆ ನಡೆಯಿತು.

ದೇಶದ ಸುಂದರತೆ ಬಾಬರಿ ಮಸ್ಜಿದ್, ಕೆಂಪು ಕೋಟೆ, ರಾಮಮಂದಿರ, ತಾಜಮಹಲನಲ್ಲಿ ಇಲ್ಲವೇ ಇಲ್ಲ. ಅದು ಹಿಂದೂ ಮುಸ್ಲಿಂರ ಪರಸ್ಪರ ಸಹಬಾಳ್ವೆಯಲ್ಲಿ ಆ ಸುಂದರತೆ ಅಡಗಿದೆ ಎಂದು ಧಾರ್ಮಿಕ ಮುಖಂಡರು ಅಭಿಪ್ರಾಯ ಪಟ್ಟರು. ಹಿಂದೂ- ಮುಸ್ಲಿಂ ಹಾಗೂ ಮರಾಠೀ ಭಾಷಿಕ ಮುಖಂಡರು ಮತ್ತು ಡಿಸಿ, ಎಸ್ಪಿ, ಕಮಿಷ್ನರ್, ಡಿಸಿಪಿ, ಪಾಲಿಕೆ ಕಮಿಷ್ನರ್ ಜೆ. ಎಚ್. ಜಗದೀಶ, ಎಸಿ ಶಿವಾನಂದ ತೇಲಿ ಭಾಗಿಯಾಗಿದ್ದರು.