SHARE

ನವದೆಹಲಿ: ಇಡೀ ಭಾರತ ಎದುರು ನೋಡುತ್ತಿದ್ದ ಅಯೋಧ್ಯೆ ವಿವಾದಕ್ಕೆ ಅಂತ್ಯ ಹಾಡಿರುವ ಸುಪ್ರೀಂಕೋರ್ಟ್, ಐತಿಹಾಸಿಕ ತೀರ್ಪು ನೀಡಿದೆ. ವಿವಾದಿತ ಪ್ರದೇಶದಲ್ಲಿ ಮಂದಿನ ನಿರ್ಮಾಣಕ್ಕೆ ಉಚ್ಛ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ತೀರ್ಪಿನ ಪ್ರತಿಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಪೀಠ, ಶಿಯಾ ವಕ್ಫ್ ಮಂಡಳಿಯ ವಿಶೇಷ ರಜಾ ಅರ್ಜಿಯನ್ನು ವಜಾಗೊಳಿಸಿದೆ. 1946ರಲ್ಲಿ ಉತ್ತರ ಪ್ರದೇಶದ ಫೈಜಾಬಾದ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

11:11: ಸುನ್ನಿ ವಕ್ಫ್ ಬೋರ್ಡ್ ಗೆ ಪರ್ಯಾಯ ಜಾಗ ನೀಡುವಂತೆ ಸುಪ್ರೀಂ ಸೂಚನೆ. ಪರ್ಯಾಯ ಜಮೀನು ನೀಡಲು ಮೂರು ತಿಂಗಳೊಳಗೆ ನಿರ್ಧರಿಸಬೇಕು: ಸುಪ್ರೀಂ ಕೋರ್ಟ್

11:10: ಭಾರತೀಯ ಸಂವಿಧಾನ ಎಲ್ಲಾ ಧರ್ಮಗಳಿಗೂ ಸಮಾನ ಹಕ್ಕು ನೀಡಿದೆ: ಸುಪ್ರೀಂ

11:09: ಅಲಹಾಬಾದ್ ಕೋರ್ಟ್ ವಿವಾದಿತ ಭಾಗವನ್ನು ಮೂರು ಭಾಗ ಮಾಡಿದ್ದು ತಾರ್ಕಿಕವಲ್ಲ: ಸುಪ್ರೀಂಕೋರ್ಟ್

11:07: ಮಸೀದಿಯ ಒಳಭಾಗದಲ್ಲಿ ಹಿಂದುಗಳು ಕೂಡ ಪೂಜೆ ಮಾಡುತ್ತಿದ್ದರು. ಆದರೆ ಬ್ರಿಟಿಷರು ಒಳಭಾಗವನ್ನು ಮುಸ್ಲಿಮರಿಗೆ, ಹೊರಭಾಗವನ್ನು ಹಿಂದುಗಳಿಗೆ ಎಂದು ಪ್ರತ್ಯೇಕಿಸಿದಾಗ ಹಿಂದುಗಳಿಗೆ ಪೂಜೆಯ ಅವಕಾಶ ಕೈತಪ್ಪಿತ್ತು: ಸುಪ್ರೀಂ

11:07: 1856 ರಿಂದ 1857 ರವರೆಗೆ ಅಲ್ಲಿ ನಮಾಜ್ ಮಾಡಲಾಗುತ್ತಿತ್ತು ಎಂಬುದಕ್ಕೂ ಯಾವುದೇ ಸಾಕ್ಷ್ಯವಿಲ್ಲ: ಸುಪ್ರೀಂ

11:06: ಮಸೀದಿಯ ಕೆಳಗೆ ಇರುವ ಆಕೃತಿಗಳು ಹಿಂದು ಕಲಾಕೃತಿ ಎಂಬುದಕ್ಕೂ ಆಗುವುದಿಲ್ಲ: ಉಚ್ಛ ನ್ಯಾಯಾಲಯ

11:04: ಮಂದಿರವನ್ನು ಧ್ವಂಸ ಮಾಡಿರುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಪುರಾತತ್ವ ಇಲಾಖೆಯ ಶೋಧನೆಯನ್ನು ಮಾನ್ಯ ಮಾಡಿದ ನ್ಯಾಯಾಲಯ

11:01: ಮಸೀದಿಯ ಗುಂಬಜನ್ನು ರಾಮಜನ್ಮ ಭೂಮಿಯ ಸ್ಥಳ ಎಂದು ಜನರು ನಂಬುತ್ತಾರೆ. ಪುರಾಣಗಳಲ್ಲೂ ಸಹ ರಾಮಲಲ್ಲ ಬಗ್ಗೆ ಉಲ್ಲೇಖವಿದೆ. ಈ ಪ್ರದೇಶವನ್ನು ಹಿಂದೂಗಳ ಪರಿಕ್ರಮ ಮಾಡುತ್ತಿದ್ದರು. ನಂಬಿಕೆಯ ಆಧಾರದ ಮೇಲಲ್ಲ, ಕಾನೂನಿನ ಸಾಕ್ಷ್ಯದ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತಿದೆ.

11:00: ಮಸೀದಿ ಅಡಿಪಾಯದ ಕೆಳಗೆ ವಿಶಾಲ ರಚನೆ ಇತ್ತು. ಆದರೆ, ಇದು ಇಸ್ಲಾಂ ರಚನೆಯಾಗಿರಲಿಲ್ಲ. ಆದರೆ ಮಂದಿರ ಒಡೆದು ಮಸೀದಿ ಕಟ್ಟಲಾಗಿದೆ ಎನ್ನುವ ಅಂಶದ ಕುರಿತು ಖಚಿತತೆ ಇಲ್ಲ. ಉತ್ಖನನದ ವೇಳೆ ಸಿಕ್ಕ ಕುರುಹುಗಳು ಇಸ್ಲಾಂ ರಚನೆಯಾಗಿರಲಿಲ್ಲ. ರಾಮ ಅಯೋಧ್ಯೆಯಲ್ಲೇ ಹುಟ್ಟಿದ ಎಂಬ ಬಗ್ಗೆ ವಿವಾದವಿಲ್ಲ. ಕೇವಲ ನಂಬಿಕೆಯಿಂದ ಹಕ್ಕನ್ನು ಸಾಬೀತು ಮಾಡಲು ಸಾಧ್ಯವಿಲ್ಲ. ಕಾನೂನಿನ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತದೆ.

10:55: ನಿರ್ಮೋಹಿ ಅಖಾಡದ ಅರ್ಜಿ ವಜಾ ನಿರ್ಮೋಹಿ ಅಖಾಡದ ಅರ್ಜಿ ವಜಾ, ಶಿಯಾ ವಕ್ಫ್ ಬೋರ್ಡ್ ಕೂಡಾ ವಜಾ, ರಾಮಲಲ್ಲಾ ಮುಖ್ಯ ಅರ್ಜಿದಾರ ಎಂದು ಮಾನ್ಯತೆ.