SHARE

ನವದೆಹಲಿ: ಇಂದು ಪ್ರಕಟಣೆಗೆ ಅಣಿಯಾದ ಅಯೋಧ್ಯೆ ಐತಿಹಾಸಿಕ ತೀರ್ಪು ದೇಶವಾಸಿಗಳ ಬಿಗಿ ಉಸಿರಿನ ಮಧ್ಯೆ ಮುಖ್ಯ ನ್ಯಾಯಮೂರ್ತಿಯಿಂದ ಓದಲಾಯಿತು. ಶಿಯಾ ವಕ್ಫ್ ಬೋರ್ಡ್ ಅರ್ಜಿ ತೀರ್ಪಿನ ಪ್ರಥಮಾರ್ಧದಲ್ಲೇ ಸುಪ್ರೀಕೋರ್ಟ್ ಐವರು ನ್ಯಾಯಮೂರ್ತಿಗಳು ವಜಾಗೊಳಿಸಿದರು. ನಂತರ ಸುನ್ನಿ ಮುಸ್ಲಿಂ ಬೋರ್ಡ್ ಅರ್ಜಿ ವಿಚಾರಣೆಗೆ ತೆಗೆದುಕೊಂಡ ಸಂವಿಧಾನದ ಪೀಠ , ಬೆಳಿಗ್ಗೆ 10:30ಕ್ಕೆ ಪ್ರಾರಂಭಿಸಿ ಕೇವಲ ಅರ್ಧ ಗಂಟೆಯಲ್ಲಿ ತೀರ್ಪಿನ ಅಂತಿಮ ಭಾಗ(Conclusion)ಮಾತ್ರ ಮುಖ್ಯ ನ್ಯಾಯಮೂರ್ತಿ ಓದಿದರು.

ನಿರ್ಮೋಹಿ ಅಖಾಡದ ಅರ್ಜಿಯನ್ನು ಸಹ ನ್ಯಾಯಾಲಯ ಅರ್ಜಿ ವಜಾ ಮಾಡಲಾಯಿತು. ಕೋರ್ಟ್ ಜನರ‌ ನಂಬಿಕೆಯನ್ನು ಒಪ್ಪಿಕೊಳ್ಳುತ್ತೆ ಅವರ ಭಾವನೆಗೆ ಬೆಲೆ ಕೊಡುತ್ತದೆ ಎಂದು ಹೇಳುತ್ತಲೇ ನ್ಯಾಯಮೂರ್ತಿ ಕೋರ್ಟ್ ತೀರ್ಪು ಓದಿದರು. ಕಳೆದ 27ವರ್ಷಗಳಿಂದ ನಡೆದ ಅಯೋಧ್ಯೆ ವಿವಾದದ ಅಂತಿಮ ಹಣಾಹಣಿ ಕ್ಷಣಗಳಿಗೆ ಕೋರ್ಟ್ ಬಿಗಿ ಉಸಿರಿನ ವಾತಾವರಣದ ಮಧ್ಯೆ ತನ್ನ ಅಂತಿಮ ತೀರ್ಪಿನ ಮೂಲಕ ಸಮಾಪ್ತಿಗೊಳಿಸಲು ಯತ್ನಿಸುತ್ತಲೇ ತೀರ್ಪಿನ ಉದ್ದಕ್ಕೂ ಸಾಗಿತು. ಆರ್ಕಿಯೊಲಾಜಿಕಲ್ ಇಲಾಖೆ ಆಧಾರಗಳು, ಸಾಹಿತ್ಯಿಕ ಆಧಾರಗಳು, ವಿದೇಶಿ ಇತಿಹಾಸಕಾರರ ಬರವಣಿಗೆಗಳು, ಭಾರತಕ್ಕೆ ಆಗಮಿಸಿದ್ದ ವಿದೇಶಿ ವಿದ್ವಾಂಸರ ಲಿಖಿತ ಅಭಿಪ್ರಾಯ ಹಾಗೂ ಸುದೀರ್ಘಾವಧಿಯಿಂದ ಬೆಳೆದು ಬಂದ ಜನಜೀವನದ ಸಂಸ್ಕ್ರತಿಯನ್ನು ಸಹ ಕೋರ್ಟ್ ವಿಮರ್ಷಿಸುತ್ತ ಸಾಗಿತು.
ಮಂದಿರ ಕೆಡವಿ ಮಸೀದಿ ಕಟ್ಟಲಾಗಿದೆ ಎಂಬುವುದನ್ನು ಒಪ್ಪದ ಕೋರ್ಟ್, ಮಸೀದಿ ಕಟ್ಟುವಾಗ ಆ ಜಾಗ ಮಾತ್ರ ಖಾಲಿ ಇರಲಿಲ್ಲ ಎಂಬುವುದನ್ನು ಉಲ್ಲೇಖಿಸಿತು.

ಹಿಂದೂಗಳು ಅಯೋಧ್ಯಾದಲ್ಲಿ ರಾಮ ಹುಟ್ಟಿದ ಎಂದು ನಂಬುತ್ತಾರೆ. ಆತ ಅಯೋಧ್ಯೆಯಲ್ಲಿ ಹುಟ್ಟಿದ್ದ ಎನ್ನುವುದರಲ್ಲಿ ವಿವಾದ ಇಲ್ಲ ಎಂಬ ವಿಷಯಗಳ ಉಲ್ಲೇಖ ಚೆಲ್ಲುತ್ತ ಕೋರ್ಟ್ ತೀರ್ಪು ಮುಂದುವರೆಯಿತು. ರಾಮಾಯಣ & ಪುರಾಣಗಳಲ್ಲೂ ಸಹ ರಾಮ ಹುಟ್ಟಿದ ಸ್ಥಳ ಅಯೋಧ್ಯೆಯೇ ಎನ್ನುವುದು ಹಾಗೂ ಚಬೂತರ, ಸೀತಾ ರಸೋಯಿಗಳು ಇರುವುದು ಸಹ ರಾಮನ ಇರುವಿಕೆ ಬಗ್ಗೆ ಪುಷ್ಠಿ ನೀಡುತ್ತಿದ್ದು ಬರೀ ನಂಬಿಕೆ ಆಚೆಗಿನ ಸತ್ಯ ಎಂಬ ವಿಶ್ಲೇಷಣೆ ಕೇಳಿಬಂತು.
ಆದರೆ ಕಾನೂನಿನ ಕಟ್ಟಳೆಗಳ ಆಧಾರದ ಮೇಲೆ ಅಯೋಧ್ಯೆ ಜಾಗದ ಮಾಲಿಕತ್ವದ ಬಗ್ಗೆ ನಿರ್ಧರಿಸಬೇಕಾಗುತ್ತದೆ ಹೊರತು ಬರೀ ನಂಬಿಕೆ ಆಚರಣೆಗಳಿಂದ ಅಲ್ಲ ಎಂದೂ ಸಹ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಸುನ್ನಿ ವಕ್ಫ್ ಬೋರ್ಡ್ ಗೆ ಪರ್ಯಾಯ ಜಾಗ ನೀಡುವಂತೆ ಸುಪ್ರೀಂ ಸೂಚನೆ. ಪರ್ಯಾಯ ಜಮೀನು ನೀಡಲು ಮೂರು ತಿಂಗಳೊಳಗೆ ನಿರ್ಧರಿಸಬೇಕು: ಸುಪ್ರೀಂ ಕೋರ್ಟ್ಸರ್ಕಾರ್ ವಿಶೇಷ ಅಧಿಕಾರ್ ಬಳಿಸಿ ಮಸೀದಿ ನಿರ್ಮಾಣಕ್ಕೆ ೫ ಎಕ್ಕರೆ ಜಾಮೀನು ಕೊಡ್ಬೇಕು ಹಾಗೂ ರಾಮ್ ಮಂದಿರ ಜಮೀನನ್ನು ಟ್ರಸ್ಟ್ ಗೆ ನೀಡಬೇಕು ಇದರ ಹೊಣೆ ಸರ್ಕಾರದ್ದು ಎಂದು ಐವರು ಸದಸ್ಯರ ನ್ಯಾಯಪೀಠ ಹೇಳಿದೆ.