SHARE

ಬೆಳಗಾವಿ: ನವ್ಹೆಂಬರ್ 1ರಂದು ಕರಾಳ ದಿನಾಚರಣೆ ಮಾಡುವುದನ್ನು ತಡೆಹಿಡಿಯತಕ್ಕದ್ದು ಎಂದು ರಾಜ್ಯ ಹೈಕೋರ್ಟ್ ಸರಕಾರಕ್ಕೆ ಆದೇಶ ನೀಡಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ನ್ಯಾಯವಾದಿ ಎಫ್. ಎಸ್. ಪಾಟೀಲ ರಾಜ್ಯದ ಗಡಿ ಉದ್ದಕ್ಕೂ ಯಾವುದೇ ಭಾಷಿಕರು ಕರಾಳ ದಿನಾಚರಣೆ ಆಚರಿಸುವಂತಿಲ್ಲ, ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಕರಾಳ ದಿನಾಚರಣೆ ಅಂತಹ ಚಟುವಟಿಕೆಗಳಿಗೆ ಅವಕಾಶ ಕೊಡಕೂಡದು ಎಂದು ಹೈಕೋರ್ಟ್ ತಿಳಿಸಿದೆ. ಇನ್ಮುಂದೆ ಭಾಷಾ ವಿವಾದ ಮಾಡಿ ಕರಾಳ ದಿನಾಚರಣೆ ಆಚರಿಸಿದರೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ ಎಂದು ಪಾಟೀಲ ತಿಳಿಸಿದರು.