SHARE

ಬೆಳಗಾವಿ: ಅಥಣಿ ಮತಕ್ಷೇತ್ರದಿಂದ ಗುರು ದಾಸ್ಯಾಳ ನಾಮಪತ್ರ ಹಿಂಪಡೆದಿದ್ದಾರೆ. ರಾಜಕೀಯ ಮುಂದಿನ ಭವಿಷ್ಯಕ್ಕಾಗಿ ನಾನು ಚುನಾವಣಾ ಸ್ಪರ್ಧೆ ಮಾಡಿದ್ದೆ. ಡಿಸಿಎಂ ಲಕ್ಷ್ಮಣ ಸವದಿ ಮನವಿ ಮೇರೆಗೆ ವಾಪಸ್ ಪಡೆದಿದ್ದೇನೆ. ಲಕ್ಷ್ಮಣ ಸವದಿ ಅವರ ವಿರುದ್ಧ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನಾಮಪತ್ರ ವಾಪಸ್ಪ ಡೆಯಲಾಗಿದೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವ ಬಿಟ್ಟು ಜೆಡಿಎಸ್ ಮೂಲಕ ಸ್ಪರ್ಧೆಗೆ ಸೇರಿದ್ದೆ, ಈಗ ಸವದಿ ಒತ್ತಾಯದ ಮೇರೆಗೆ ಹಿಂಪಡೆದೆ ಎಂದು ಪ್ರತಿಕ್ರಿಯಿಸಿದ್ದಾರೆ.