SHARE

ಬೆಳಗಾವಿ: ಉತ್ತರ ಹಾಗೂ ದಕ್ಷಿಣ ಶಾಸಕರಾದ ಅನಿಲ ಬೆನಕೆ & ಅಭಯ ಪಾಟೀಲ ಅವರು ಮಿಡಿಯಾ ಕೇಂದ್ರದಲ್ಲಿ ಕಾಗವಾಡ, ಅಥಣಿ ಗೋಕಾಕ ಕ್ಷೇತ್ರ ಮತದಾರರಿಗೆ ಅಭಿನಂದನೆ ಸಲಿಸಿದರು. ರಾಜ್ಯ ಸರಕಾರದ ಅಸ್ಥಿರತೆ ಭಯ ಹೋಗಿ ಸ್ಥಿರತೆ ಉಂಟಾಗಿದೆ. ಯಡಿಯೂರಪ್ಪ ನೇತೃತ್ವದ ನಾಯಕತ್ವಕ್ಕೆ ರಾಜ್ಯದ ಜನತೆ ಬೆಂಬಲ ಕೊಟ್ಟಿದ್ದಾರೆ. ಅಭಿವೃದ್ಧಿ ಆಡಳಿತ ವೇಗ ಪಡೆಯಲಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು. ನೆರೆ ಸಂತ್ರಸ್ತ ಪ್ರದೇಶದಲ್ಲೆ ಬಿಜೆಪಿ ಜಯ ಸಾಧಿಸಿರುವುದು ಅವರಿಗೆ ಪರಿಹಾರ ಸಿಕ್ಕಿದ ಸಂಕೇತ ಎಂದರು. ಅನರ್ಹರಾಗಿದ್ದ ಈಗ ಮತ್ತೆ ಅರ್ಹರಾದವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.