SHARE

ಬೆಳಗಾವಿ: ಆಸೆ ಆಮೀಷ ಒಡ್ಡದೇ ಜನರ ಪ್ರೀತಿಯಿಂದ ಅಭಿಮಾನದಿಂದ ನಾವು ಮತ್ತೆ ಆರಿಸಿ ಬಂದಿದ್ದೇವೆ ಎಂದು ಗೋಕಾಕದಲ್ಲಿ ಜಯಭೇರಿ ಭಾರಿಸಿರುವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಇಂದು ಮತ ಎಣಿಕೆ ನಂತರ ಮಿಡಿಯಾ ಕೇಂದ್ರಕ್ಕೆ ಆಗಮಿಸಿದ ಅವರು ಜನತಾ ನ್ಯಾಯಾಲಯ ನಮಗೆ ಸೂಕ್ತ ತೀರ್ಪು ಕೊಟ್ಟು ಬೆನ್ನು ತಟ್ಟಿದೆ. ಮೋದಿ, ಅಮಿತ ಷಾ ಹಾಗೂ ಯಡಿಯೂರಪ್ಪ ಅವರಿಗೆ ಜನ ನನ್ನನ್ನು ಗೆಲ್ಲಿಸುವ ಮೂಲಕ ಬೆಂಬಲ ನೀಡಿದ್ದಾರೆ. ಸಿದ್ದರಾಮಯ್ಯ ಈಗಲೂ ನನ್ನ ನಾಯಕ. ಅವರ ಬಗ್ಗೆ ನನಗೆ ಈಗಲೂ ಅಭಿಮಾನ ಮತ್ತು ಪ್ರೀತಿ ಇದೆ. ಕೆಟ್ಟ ಸರಕಾರ ಮತ್ತು ಜಾತಿವಾದ ಸರಕಾರ ತೆಗೆಯಲು ನಾವು ಕಾಂಗ್ರೆಸ್ ಬಿಟ್ಟು ಬಂದಿದ್ದೇವು ಎಂದರು. ಹಠವಾದಿತನದ ಚಟುವಟಿಕೆಗಳು ನಿಶ್ಚಳ ಜಯ ನಮಗೆ ಕೊಟ್ಟಿದೆ. ಅದೃಷ್ಟ ಮತ್ತು ನ್ಯಾಯ ನಮ್ಮ ಕೈ ಹಿಡಿದಿದೆ ಎಂದರು.

ಲಖನ್ ಜಾರಕಿಹೊಳಿ ಇಂದಿನಿಂದ ನನ್ನ ತಮ್ಮ. ನಿನ್ನೆಯವರೆಗೆ ಆತ ನನ್ನ ತಮ್ಮನಾಗಿರಲಿಲ್ಲ. ಲಕ್ಷ್ಮೀ ಹೆಬ್ಬಾಳಕರ ಹೆಣ್ಣಾಗಿ ಹೆಣ್ಣಿನಂತೆ ವರ್ತಿಸಲಿ. ಆಕೆ ಮತ್ತು ಆಕೆಯ ತಮ್ಮ ಚನ್ನರಾಜ ಹಟ್ಟಿಹೊಳಿ ದೋ ನಂಬರ ವ್ಯವಹಾರಗಳಲ್ಲಿ ತೊಡಗಿದ್ದು ತತಕ್ಷಣ ದೋ ನಂಬರ ವ್ಯವಹಾರ ನಿಲ್ಲಿಸುವುದು ಉಚಿತ ಎಂದು ಗಂಭೀರ ಸೂಚಿಸಿದರು. ಗಂಡಸಿನ ಗಂಡಸ್ಥನ ಪ್ರಶ್ನಿಸುವ ಲಕ್ಷ್ಮೀ ಹೆಬ್ಬಾಳಕರ ಹೆಣ್ಣಾಗಿ ಗೌರವದಿಂದ ವರ್ತಿಸಲಿ. ಗಂಡಿನ ಗಂಡಸ್ತನದ ಅವಳ ಸಾರ್ವಜನಿಕ ಚಿಂತನೆ ಅವಳಿಗೆ ಗೌರವ ತರೊಲ್ಲ ಎಂದರು. ಅಥಣಿ ಕ್ಷೇತ್ರದ ಅಭ್ಯರ್ಥಿ ಮಹೇಶ ಕುಮಟೊಳ್ಳಿ ಉಪಸ್ಥಿತರಿದ್ದರು.