SHARE

ಬೆಳಗಾವಿ: ಗೋಕಾಕ ಉಪಚುನಾವಣೆಯಲ್ಲಿ ಅನರ್ಹ ಶಾಸಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಸುಮಾರು 20ಸಾವಿರ ಅಂತರದ ಗೆಲುವು ಸಾಧಿಸಿದ್ದಾರೆ. 16ನೇ ಸುತ್ತಿನಲ್ಲಿ 20,588 ಮುನ್ನಡೆ ಸಾಧಿಸಿ ರಮೇಶ ಗೆಲುವಿನ ನಗೆ ಬೀರಿದರು. ಪ್ರತಿಸ್ಪರ್ಧಿ ಕಾಂಗ್ರೆಸ್‌ ಲಖನ್ ಜಾರಕಿಹೊಳಿ ಅವರಿಗೆ ಬಿಜೆಪಿಯೊಂದಿಗೆ ಸೆಣಸಿ ಸೋಲು ಒಪ್ಪಿಕೊಳ್ಳುವಂತಾಯಿತು. ಜಿಲ್ಲಾ ಚುನಾವಣಾಧಿಕಾರಿ ಘೋಷಣೆ ಮಾತ್ರ ಬಾಕಿ ಇದೆ.