SHARE

ಖಾನಾಪುರ: ಕನ್ನಡ ನಾಡು, ನುಡಿ, ನೆಲ, ಭಾಷೆ ರಕ್ಷಣೆಗಾಗಿ ಹೋರಾಟ ಮಾಡುತ್ತೆನೆಂಬ ಸೋಗಿನಲ್ಲಿ ರಾಜಕೀಯ ಮಾಡುವುದು, ಸರ್ಕಾರಿ ಕಛೇರಿಗಳಲ್ಲಿ ಹಣ ವಸೂಲಿ ಮಾಡುವುದು ಜೊತೆಗೆ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಖಾನಾಪುರ ತಾಲೂಕಾ ಪ್ರಧಾನ ಕಾರ್ಯದರ್ಶಿ ದಶರಥ ಬನೋಶಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿರಿ ಎಂದು ರಾಯಣ್ಣ ಬಳಗಪ್ಪನವರ ಹೇಳಿದರು.

ಪಟ್ಟಣದಲ್ಲಿರುವ ತಾಲೂಕಾ ತಹಶಿಲ್ದಾರ ಕಛೇರಿಯಲ್ಲಿ ಗುರುವಾರದಂದು ಕರವೇ ದಶರಥ ಬನೋಶಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಶಿಲ್ದಾರ ಶಿವಾನಂದ ಉಳ್ಳೆಗಡ್ಡಿ ಅವರಿಗೆ ಮನವಿ ನೀಡಿ ಮಾತನಾಡಿದರು. ವಿವಿಧ ಸರಕಾರಿ ಯೋಜನೆಗಳಡಿಯಲ್ಲಿ ಫಲಾನುಭವಿಗಳ ಬಳಿ ಹೋಗಿ ನಿಮ್ಮ ಕೆಲಸ ಮಾಡಿಸಿಕೊಡುತ್ತೆನೆಂದು ಜನರ ಬಳಿ ಹಣವಸೂಲಿ ಮಾಡುವುದು ಚಾಳಿಯಾಗಿದೆ. ರಾಜಕೀಯ ಮುಖಂಡರು ತಮ್ಮ ವೈರಿಗಳ ವಿರುದ್ಧ ಪ್ರತಿಭಟನೆ ಮಾಡು ನಿನಗೆ ಹಣ ನೀಡುತ್ತೆನೆಂದು ಹೇಳಿದಾಗ ಅವರ ಬಳಿ ಹಣ ಪಡೆದು ಕರವೇ ಎಂಬ ಸಂಘಟನೆಯ ನೆಪದಲ್ಲಿ ಪ್ರತಿಭಟನೆ ಮಾಡಿ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ಹೋರಾಟ ಮಾಡುವ ಸಂಘಟನಾಕಾರರಿಗೆ ಕಳಂಕ ತರುತ್ತಿದ್ದಾರೆ. ಈ ಮಹಾಶಯ ಕಳೆದೆರಡು ದಿನಗಳ ಹಿಂದೆ ಕನ್ನಡ ನಾಮಫಲಕಗಳ ದೋಷ ಎಂಬ ಪ್ರತಿಭಟನೆ ನಡೆಸಿ ತಮ್ಮ ಬಳಿ ಮನವಿ ನೀಡುವಗಾ ಕನ್ನಡದ ಕಗ್ಗೊಲೆ ಎನ್ನುವ ಬದಲು ಕನ್ನಡದ ಕೊಗ್ಗೊಲೆ ಎನ್ನುತ್ತಾನೆ. ಮತ್ತೋರ್ವನು ಕಗ್ಗೋಲೆ ಎಂಬ ಪದವನ್ನು ಕಗ್ಗೋಲು ಎಂದು ಒದುತ್ತಾನೆ. ಅಂದರೆ ಕನ್ನಡಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧರಿರುವ ಇವರ ಬಾಯಲ್ಲಿಯೇ ಕನ್ನಡ ಮಾತೆ ನಲುಗುತ್ತಿದ್ದಾಳೆ.

ಹೀಗೆ ಮೊದಲಿಂದಲೂ ಈತನು ಕರ್ನಾಟಕ ರಕ್ಷಣಾ ವೇದಿಕೆಯ ಹೆಸರನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು ರಾಜಕೀಯ ಮತ್ತು ಹಣವಸೂಲಿ ಯನ್ನೇ ದಿನಚರಿಯಾಗಿಸಿಕೊಂಡಿರುವ ಇತನನ್ನು ಹೀಗೆಯೇ ಬಿಟ್ಟರೆ ಕರವೇ ಸಂಘಟನೆಯ ಮುಖಂಡರಿಗೆ ಕೆಟ್ಟ ಹೆಸರು ಬರುವುದಷ್ಟೇ ಅಲ್ಲದೇ ಜನರೂ ಕೂಡ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂಧರ್ಭದಲ್ಲಿ ಮಹಾವೀರ ಹುಲಕವಿ, ವಸಂತ ಮಂದಾರ, ಸಂತೋಷ ಬಳಗಪ್ಪನವರ, ಚಂದ್ರಕಾಂತ ಸುಣಗಾರ, ನಿಂಗಪ್ಪ ದೆಮಟ್ಟಿ, ರತ್ನಾಕರ ಠಕಾಯಿ, ವಿಠ್ಠಲ ಬಿರಣವರ, ‌ನಾಗರಾಜ ಪಟೇಲ ಹೀಗೆ ತಾಲೂಕಿನ ಹಲವಾರು ಕನ್ನಡಾಭಿಮಾನಿಗಳು ಹಾಜರಿದ್ದರು.