SHARE

ಬೆಳಗಾವಿ: ಕಡೋಲಿ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸುಗಿದ ಕ್ರೂರಿಯನ್ನು ಗಲ್ಲಿಗೇಲಿಸಬೇಕು ಇಲ್ಲವೇ ಎನ್ ಕೌಂಟರ ಮಾಡಿ ಬಿಸಾಕಬೇಕು. ಶಿಘ್ರವಾಗಿ ನ್ಯಾಯ ಸಿಗದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ತಂಗಡಗಿಮಠದ ಭಾರತಿ ಅಪ್ಪಣ್ಣ ಸ್ವಾಮಿಜಿ ಹೇಳಿದರು. ಮಂಗಳವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಅಖಿಲ ಕರ್ನಾಟಕ ಹಡಪದ ಸಮಾಜ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಅತ್ಯಾಚಾರವು ದೇಶಕ್ಕೆ ಮಾರಕವಾಗಿದ್ದು ಮೇಲಿಂದ ಮೇಲೆ ಇಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಬೆಳಗಾವಿ ಜಿಲ್ಲೆ ಕಡೋಲಿ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸುಗಿದ್ದು ಅವನನ್ನು ಶೀಘ್ರವಾಗಿ ಗಲ್ಲಿಗೇರಿಸಬೇಕು ಇಲ್ಲದಿದ್ದರೆ ತೆಲೆಂಗಾನ ಪ್ರಕರಣದ ಮಾದರಿಯಲ್ಲೇ ಎನ್ ಕೌಂಟರ ಮಾಡಿ ಬಿಸಾಕಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದ ಕುರಿತು ಮುಖ್ಯಮಂತ್ರಿ ಬಿಎಸ್ವೈ ಜೊತೆ ವೈಯಕ್ತಿಕವಾಗಿ ಚರ್ಚೆ ನಡೆಸಿದ್ದು ಸಂತ್ರಸ್ಥೆಗೆ ನ್ಯಾಯ ಒದಗಿಸುವ ಬರವಸೆಯನ್ನು ನೀಡಿದ್ದಾರೆ. ಒಂದು ವೇಳೆ ಬಾಲಕಿಗೆ ನ್ಯಾಯ ಸಿಗದಿದ್ದರೆ ನಾವು ದಿರ್ಘ ಹೋರಾಟ ಮಾಡಿ ವಿಧಾನ ಸೌಧವನ್ನು ಮುತ್ತಿಗೆ ಹಾಕುತ್ತೆವೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ದೆವು ಮುಂಡರಗಿ, ಸಿದ್ದು ಹಡಪದ, ಸಂತೋಷ ಹಡಪದ, ಸುರೇಶ ಹಡಪದ, ಬಸವರಾಜ ಹಡಪದ, ಮಡಿವಾಳಪ್ಪಾ ಹಂಪನ್ನವರ, ಆನಂದ ಕುರ್ಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು