SHARE

ಬೆಳಗಾವಿ: ಪ್ರಸ್ತುತ ರಾಜ್ಯ ಸರಕಾರ ಪೂರೈಸಿದ 100ದಿನಗಳ ಸಂಭ್ರಮಾಚರಣೆ ಸಂಬಂಧ ಛಾಯಾಚಿತ್ರಗಳ ಪ್ರದರ್ಶನ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು ಪ್ರಾರಂಭವಾಯಿತು. ಶಾಸಕ ಅನಿಲ ಬೆನಕೆ ಛಾಯಾಚಿತ್ರ ಪ್ರದರ್ಶನದ ಚಾಲನೆ ನೀಡಿದರು. ರಾಜ್ಯ ಸರಕಾರ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಕ್ರಮ, ಬರ, ಪ್ರವಾಹ ಹಾಗೂ ಅತಿವೃಷ್ಟಿ ನಿರ್ವಹನೆ ಕುರಿತ ಚಿತ್ರಪ್ರದರ್ಶನ ಇಂದಿನಿಂದ ಮೂರು ದಿನ ನಡೆಯಲಿದೆ. ಸಾರಿಗೆ ಡಿಸಿ ಮಹಾದೇವ ಮುಂಜಿ, ವಾರ್ತಾ ಸಹಾಯಕ ನಿರ್ದೇಶಕ ಗುರನಾಥ ಕಡಬೂರ, ಮಾರ್ಕೆಟ್ ಇನ್ಸಪೆಕ್ಟರ್ ಶಿವಯೋಗಿ, ಅನಂತ ಪಪ್ಪು ಮತ್ತಿತರರು ಉಪಸ್ಥಿತರಿದ್ದರು.