SHARE

ಬೆಂಗಳೂರು: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಶತೀರ್ಥ ಸ್ವಾಮೀಜಿ ಅವರ ದೇಹಾಂತ್ಯ ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಗಳ ದೇಹಾಂತ್ಯದಿಂದ ಹಿಂದೂ ಧರ್ಮದ ಪ್ರಮುಖ ಮಾರ್ಗದರ್ಶಿ ಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಅವರು ವಿಷಾದಿಸಿದ್ದಾರೆ.

ಶ್ರೀಗಳು ಎಳವೆಯಲ್ಲಿಯೇ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿ, ಪೇಜಾವರ ಮಠಾಧೀಶರಾದವರು. ಅಷ್ಟಮಠಗಳ ಪರಂಪರೆಯಲ್ಲಿ ಅತಿ ಹೆಚ್ಚು ಬಾರಿ ಉಡುಪಿ ಪರ್ಯಾಯದ ನೇತೃತ್ವ ವಹಿಸಿದ ಹೆಗ್ಗಳಿಕೆ ಶ್ರೀಗಳದ್ದು. ಆಧ್ಯಾತ್ಮಿಕ ಸಾಧನೆಯೊಂದಿಗೆ ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡವರು ಅವರು. ದಲಿತ ರೊಂದಿಗೆ ಸಹಭೋಜನ ದಂತಹ ಕ್ರಮಗಳಿಂದ ಹಿಂದೂ ಧರ್ಮದಲ್ಲಿ ಅಸಮಾನತೆಯ ಕೂಗು ಕ್ಷೀಣಿಸುವಂತೆ ಮಾಡಲು ಪ್ರಯತ್ನಿಸಿದವರು. ಹಿಂದೂ ಧರ್ಮದ ಉತ್ಥಾನಕ್ಕೇ ಶ್ರೀಗಳ ಕೊಡುಗೆ ಅವಿಸ್ಮರಣೀಯ ಎಂದಿರುವ ಮುಖ್ಯಮಂತ್ರಿಗಳು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವನ್ನು ನೋಡುವ ಅವರ ಅಪೇಕ್ಷೆ ನೆರವೇರಲಿಲ್ಲ ಎಂದು ದುಃಖಿಸಿದ್ದಾರೆ.

ಶ್ರೀಕೃಷ್ಣನು ಅವರ ಆತ್ಮಕ್ಕೆ ಮೋಕ್ಷ ಕರುಣಿಸಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಕ್ತಾದಿಗಳಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.