SHARE

ಬೆಳಗಾವಿ: ಜಿಲ್ಲೆಯ ಸರಕಕಾರಿ ಪ್ರೌಢಶಾಲಾ ಶೌಚಾಲಯದಲ್ಲಿ ಶಿಶು ಬಿಟ್ಟು ಪರಾರಿಯಾದ ಘಟನೆಯಲ್ಲಿ ತಾಯಿ ಪತ್ತೆಯಾಗಿದ್ದು, ಆಕೆ ಅದೇ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಅದೇ ಶಾಲಾ ವಿದ್ಯಾರ್ಥಿನಿ ಮೇಲೆ ಕಣ್ಣು ಹಾಕಿದ್ದ ಶಿಕ್ಷಕ ಕೋಹಳ್ಳಿಯ ಭೀಮಪ್ಪ ಕುಂಬಾರ ಎಂಬಾತನನ್ನು ಫೋಕ್ಸೊ ಕಾಯ್ದೆ ಅಡಿ ಬಂಧಿಸಲಾಗಿದೆ. ಡಿ. 28ರಂದು ಹೆರಿಗೆಯಾದ ತತಕ್ಷಣ ತಾಯಿ ಹೆಣ್ಣು ಕೂಸನ್ನು ಶೌಚಾಲಯದಲ್ಲಿ ಬಿಟ್ಟು ಹೋಗಿದ್ದಳು. ಮಗುವಿನ ಅಳುವಿನ ಧ್ವನಿ ಕೇಳಿದ ಶಾಲಾ ಮಕ್ಕಳಿಂದ ಪ್ರಕರಣ ಬಯಲಿಗೆ ಬಂತು. ನಡೆದ ಪೊಲೀಸ್ ತನಿಖೆಯ ನಂತರ ವಿಷಯ ಸಂಪೂರ್ಣ ಬಯಲಾಗಿದೆ.