SHARE

ಬೆಳಗಾವಿ: ಸಂಸದ ಹಾಲಿ ಕೇಂದ್ರಸಚಿವ ಸುರೇಶ ಅಂಗಡಿ ಅವರ ಕನಸಿನ DGFT ಕಚೇರಿಯನ್ನು ಕುಡಿಯೊಡೆಯುವ ಮುನ್ನವೇ ಬೆಳಗಾವಿಯಿಂದ ಬೆಂಗಳೂರಿಗೆ ತಳ್ಳುವ ಯತ್ನ ನಡೆದಿದೆ. Director General Foreign Trade ಅನ್ನು ಬೆಳಗಾವಿಯಿಂದ ಬೆಂಗಳೂರಿಗೆ ವರ್ಗಾಯಿಸುವ ನಿರ್ಧಾರ ಕೇಂದ್ರ ಸರಕಾರವೇ ತಳೆದಿದೆ ಎಂಬುವುದು ತಿಳಿದು ಬಂದಿದೆ. ವಿದೇಶದೊಂದಿಗೆ ಉತ್ತರ ಕರ್ನಾಟಕದ ಜಿಲ್ಲೆಗಳು ರಫ್ತು ವ್ಯವಹಾರ ಮಾಡುವ ಉದ್ದೇಶದಿಂದ ಪ್ರಯಾಸದಿಂದ ಪಡೆದಿದ್ದ ಡಿಜಿಎಫ್ ಟಿ ಕಚೇರಿ ಈಗ ರಾಜಧಾನಿ ಬೆಂಗಳೂರು ಪಾಲಾಗಲಿದೆ.

ಅಂದು ಸಂಸದರಾಗಿದ್ದ ಸುರೇಶ ಅಂಗಡಿ ಪ್ರಯತ್ನದಿಂದ ಅಂದಿನ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಉಪರಾಜಧಾನಿ ಬೆಳಗಾವಿಗೆ ವಿದೇಶಿ ವ್ಯಾಪಾರ ಮಹಾನಿರ್ದೇಶಕರ ಕಚೇರಿ ಮಂಜೂರು ಮಾಡಿದ್ದರು. ಕಳೆದ ಎರಡು ವರ್ಷ ಮೇಲ್ಪಟ್ಟು ಕೆಲಸ ಆರಂಭಿಸಿದ್ದ ಡಿಜಿಎಫ್ ಟಿ ಕಚೇರಿ ಪೂರ್ಣ ಬೆಳಕಿಗೆ ಬರುವ ಮೊದಲೇ ಎತ್ತಂಗಡಿ ಮಾಡುವ ಹುನ್ನಾರ ಬಯಲಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಸಂಘಟನೆಗಳು ಆಕ್ಷೇಪ ವ್ಯಕ್ತೊಡಿಸಿದ್ದು ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ.