SHARE

ವರದಿ: ಕಾಶೀಮ ಹಟ್ಟಿಹೊಳಿ, ಖಾನಾಪುರ
ಖಾನಾಪುರ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೆರೀಸಿದ ಆಲದ ಮರದ ಬಳಿಯಿರುವ ರಾಮಭಕ್ತ ಹನುಮಂತ ದೇವರು ಒಂದೇ ಕಣ್ಣು ಬಿಟ್ಟಿರುವ ಸುದ್ದಿ ಎಲ್ಲ ಕಡೆಯೂ ವಿಷಯ ಚರ್ಚೆಗೆ ಗ್ರಾಸವಾಗಿದೆ. ಹೌದು ಎಲ್ಲಪ್ಪಾ ಇಂತಹ ಪವಾಡ ಸ್ರಷ್ಠಿಸುವ ಕಾರ್ಯ ನಡೆದಿದದ್ದು ಅಂದುಕೊಂಡಿರಾ, ಅದುವೇ ಗಡಿಜಿಲ್ಲೆ ಬೆಳಗಾವಿಯ, ಮಲಪ್ರಭೆ ಜನ್ಮತಾಳಿದ ಖಾನಾಪುರ ತಾಲೂಕಿನ, ನಾಡಿಗೆ ಹೆಸರುವಾಸಿಯಾದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನಿಗೆ ಗಲ್ಲಿಗೆರಿಸಿ, ಸಮಾಧಿ ಇರುವ ಸ್ಥಳ ನಂದಗಡ ಗ್ರಾಮದಲ್ಲಿ.

ನಾಡಿನ ಅನೇಕ ಹನುಮ ಮತ್ತು ರಾಯಣ್ಣನ ಭಕ್ತರು ಈ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದರ್ಶನ ಪಡೆಯುತ್ತಿದ್ದಾರೆ. ಈ ಸ್ಥಳಕ್ಕೆ ವಿಷಯವಾಗಿ ಸ್ಥಳೀಯ ರಾಯಣ್ಣ ಸ್ಮಾರಕ ಅಭಿವೃದ್ಧಿ ಹೋರಾಟಗಾರರಾದ ಶ್ರೀ ಶಂಕರ ಸೋನೋಳ್ಳಿಯವರಿಗೆ ಸಂಪರ್ಕಿಸಿದಾಗ “ಇಂದಿನ ವೈಜ್ಞಾನಿಕ ಯುಗದಲ್ಲಿ ಇದನ್ನು ನಾವು ಪವಾಡವೇ ಎಂದು ಹೇಳಿದರೇ ಬಹಳ ಜನ ಈ ವಿಷಯವನ್ನು ನಂಬುವುದು ಕಷ್ಟ. ಆದರೇ ಇವತ್ತು ಯಾವುದೇ ಒಂದು ಮುಂದುವರೆದ ರಾಷ್ಟ್ರ ಅಥವಾ ಸಮುದಾಯ ಎಷ್ಟೇ ಸುರಶಿಕ್ಷತರಿದ್ದರೂ ಕೂಡಾ ಒಂದು ಒಳ್ಳೆಯ ಕಾರ್ಯವನ್ನು ಪ್ರಾರಂಭಿಸುವ ಮುಂಚೆ, ಅವರವರಿಗೆ ಇಷ್ಟವಾಗುವ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಅಂದಾಗ ದೇವರಿದ್ದಾನೆ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಈ ಸುದ್ದಿಯನ್ನು ಗಮನಿಸಿದ ಧಾರವಾಡದ ಭಕ್ತರೊಬ್ಬರು ನನಗೆ ದೂರವಾಣಿ ಕರೆ ಮಾಡಿ ಈ ವಿಷಯವಾಗಿ ನುರಿತ ಪಂಡಿತರನ್ನು ಕೇಳಿದಾಗ ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ, ಇದೊಂದು ಶುಭ ಸಂಕೇತ, ಅಲ್ಲಿಯ ಎಲ್ಲ ಅಭಿವೃದ್ಧಿ ಕಾರ್ಯಗಳು ಇನ್ನೂ ಮುಂದೆ ಒಳ್ಳೆಯ ರೀತಿಯಲ್ಲಿ ಸಾಗಿ ರಾಯಣ್ಣನ ಎಲ್ಲ ಭಕ್ತರ ಮನೋಕಾಮನೆಗಳು ಈಡೇರುವ ಶುಭ ಸೂಚಕ ಇದಾಗಿದೆ ಎಂದು ತಿಳಿಸಿದರು. ಇದನ್ನು ಕೇಳಿ ನಮಗೂ ಸಂತೋಷವಾಯಿತು. ನಾವು ಕೂಡಾ ಈ ನಾಡಿಗೇ ದೇಶಕ್ಕೆ ಎಲ್ಲ ಜನತೆಗೂ ಒಳ್ಳೆಯದಾಗಲಿ ಎಂದು ರಾಮಭಕ್ತ ಹನುಮನಲ್ಲಿ ಪ್ರಾರ್ಥಿಸಿದೆವು ಎಂದು ಹೇಳಿದರು. ಈ ಸ್ಥಳಕ್ಕೆ ಭೇಟಿ ನೀಡಲು ಅನೇಕ ಭಕ್ತರು ನಾಡಿನ ವಿವಿಧ ಭಾಗಗಳಿಂದ ಆಗಮಿಸುತ್ತಿದ್ದು, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ, ಸಂತೋಷದಿಂದ ತೆರಳುತ್ತಿದ್ದಾರೆ. ಆದರೆ ಅಲ್ಲಿ ಬಂದ ಭಕ್ತರಿಗೆ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೆಕೆನ್ನುವ ಬೇಡಿಕೆ ಅವರದ್ದಾಗಿದೆ.