SHARE

ಬೆಳಗಾವಿ: ಏಕಸ್ SEZ ವತಿಯಿಂದ ಇಂದು ಹತ್ತರಗಿ ಬಳಿ ಸರಕಾರಿ ಶಾಲಾ ಮಕ್ಕಳಿಗೆ ಆಯೋಜಿಸಸಲಾಗಿದ್ದಆವಿಷ್ಕಾರ 2020 ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಏಕಸ್ SEZ ಈ ವಿನೂತನ ವಿಜ್ಞಾನ ಅವಿಷ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದವು. ಏಕಸ್ SEZ ನಿರ್ದೇಶಕ ಡಾ. ಪ್ರವೀಣಕುಮಾರ ನಾಯಕ, ಅಗ್ನಿಶಾಮಕ ಅಧಿಕಾರಿ ಶಿವಪ್ಪ ತಹಶೀಲ್ದಾರ, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಹುಬ್ಬಳ್ಳಿಯ ಸತೀಶ ಗೊಡಕಂಡಿ, ಬಬಿತಾ ರಾಜಶೇಖರ ಇತರರು ಭಾಗವಹಿಸಿದರು.

ಏಕಸ ಫೌಂಡೇಶನನ ಕಾರ್ಪೋರೇಟ್ ಸೋಸಿಯಲ್ ರಿಸ್ಪಾನ್ಸಿಬಿಲಿಟಿ ವಿಭಾಗದಿಂದ ಸರಕಾರಿ ಮಕ್ಕಳಲ್ಲಿನ ವಿಜ್ಞಾನ ಆವಿಷ್ಕಾರ ಪ್ರತಿಭೆ ಹೊರಗೆಡುವ ಪ್ರಯತ್ನ ನಡೆಯಿತು. ಹುಕ್ಕೇರಿ ತಾಲೂಕಿನ ಹಲವು ಸರಕಾರಿ ಶಾಲೆಗಳ ಮಕ್ಕಳ ವಿಜ್ಞಾನ ಆವಿಷ್ಕಾರಗಳ ಪ್ರದರ್ಶನ ನಡೆಯಿತು. ಅಗಸ್ತ್ಯ ಪೌಂಡೇಶನನ ಬಬಿತಾ ರಾಜಶೇಖರ ಮಾತನಾಡಿ ಒಂದೆ ತಿಂಗಳ ಅವಧಿಯಲ್ಲಿ ಸರಕಾರಿ ಶಾಲಾ ಮಕ್ಕಳು ತಯಾರಿಸಿದ ವಿಜ್ಞಾನ ಆವಿಷ್ಕಾರಗಳು ಗ್ರಾಮೀಣ ಸರಕಾರಿ ಮಕ್ಕಳಲ್ಲಿ ವಿಜ್ಞಾನದ ಅಪಾರ ಜ್ಞಾನ ಇರುವುದು ಕಂಡುಬರುತ್ತದೆ (Scientific Attitude) ಎಂದು ಶ್ಲಾಘಿಸಿದರು. ಶಿಕ್ಷಣ ತಜ್ಞೆ ನಿವೇದಿತಾ ಮುಖರ್ಜಿ ಮಕ್ಕಳಿಗೆ ಶಿಕ್ಷಣ ಆವಿಷ್ಕಾರಗಳ ಬಗ್ಗೆ ಮರ್ತು ಇಂದಿನ ಪ್ರೋತ್ಸಾಹ ಜಗತ್ತಿನ ಮಾಹಿತಿ ನೀಡಿದರು. ಶಿಕ್ಷಣ ಇಲಾಖೆಯ ಪ್ರತಿನಿಧಿ ಎಸ್. ಡಿ. ನಾಯಕ ಉಪಸ್ಥಿತರಿದ್ದರು.