SHARE

ಬೆಳಗಾವಿ: ಸಾಮಾಜಿಕ ಕಾರ್ಯಕರ್ತ ಆಟೊ ಡ್ರೈವರ್ ನಗರದ ಮಂಜುನಾಥ ಪೂಜಾರಿ ಬುಕ್ ಆಫ್ ರೆಕಾರ್ಡ್ಸ್ ಕೊಡಮಾಡುವ Nocturnal Ambulance Man ಗೌರವಕ್ಕೆ ಪಾತ್ರರಾಗಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅವರ ಸೇವೆ ಪರಿಗಣಿಸಿದ್ದು, ಮೆಡಲ್ & ಗೌರವ ಪ್ರಮಾಣ ಪತ್ರ ನೀಡಿದೆ. ಸಾರ್ವಜನಿಕರಿಗೆ ಉಚಿತ/ ನ್ಯಾಯಯುತ ದರದಲ್ಲಿ ಸೌಜನ್ಯ ಸೇವೆ ಸಲ್ಲಿಸಿರುವುದಕ್ಕಾಗಿ ಈ ಪ್ರಮಾಣಪತ್ರ ಹುಡುಕಿಕೊಂಡು ಬಂದಿದೆ. ಬಡವರನ್ನು ದಿನದ ಯಾವುದೇ ಹೊತ್ತು ಉಚಿತವಾಗಿ ಆಸ್ಪತ್ರೆ ತಲುಪಿಸಿದ ಹೆಗ್ಗಳಿಕೆ ಮಂಜುನಾಥ ಪೂಜಾರಿ ಅವರ ಹೆಗಲಿಗೆ ಇದೆ.

ಇಂದು ಸುದ್ದಿ ಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಮಾಜ ಸೇವಕ ಹಾಗೂ ಸಮೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ವಿರೇಶ ಕಿವಡಸಣ್ಣವರ ಮಲ್ಟಿ ಟಾಸ್ಕ್ ಸೇವೆ ಮೂಲಕ ಸಮಾಜ ಸೇವೆ ಮಾಡುವ ಮಂಜುನಾಥ ಅವರಿಗೆ ಬಡವರಿಗಾಗಿಯೇ ಒಂದು ಅಂಬ್ಯುಲೆನ್ಸ್ ಮಾಡುವ ಆಸೆ ಹೊತ್ತಿದ್ದಾರೆ. ರಕ್ತದಾನ, ದೇಹದಾನ & ಅಂಗಾಂಗ ದಾನದ ಬಗ್ಗೆ ಅವರು ಅಪಾರ ಕಾಳಜಿ ಹೊಂದಿದ್ದಾರೆ. ಅವರ ಸೇವೆ ನಗರದ ಇತರ ಎಲ್ಲರಿಗೂ ಮಾದರಿ ಆಗಬೇಕು ಎಂದರು. ನಾಗರತ್ನ ರಾಮಗೌಡರ, ನಿಂಗಪ್ಪ ಪೂಜಾರಿ, ಶಾಂತಕ್ಕ ಪೂಜಾರಿ, ರಾಜಶ್ರೀ ಪೂಜಾರಿ ಇತರರು ಉಪಸ್ಥಿತರಿದ್ದರು.