SHARE

ಬೆಳಗಾವಿ: ಅನಧಿಕೃತವಾಗಿ ಆಮೆಗಳನ್ನು ತಂದಿಟ್ಟು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಳಗಾವಿ ವಲಯ ಅರಣ್ಯಾಧಿಕಾರಿಗಳು ತಡರಾತ್ರಿ ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಬಿಜಗರಣಿ ಮತ್ತು ರಾಕಸಕೊಪ್ಪ ಮದ್ಯದಲ್ಲಿ RFO ಆರ್.ಎಚ್. ಡೊಂಬರಗಿ ನೇತೃತ್ವದ ತಂಡ ದಾಳಿ ನಡೆಸಿ ತಪಾಸಿಸಿ ವಶಕ್ಕೆ ಪಡೆದರು.

ಆಮೆ ಕೊಳ್ಳುವವರ ಸೋಗಿನಲ್ಲಿ DRFO ವಿನಯ ಗೌಡರ, ರಮೇಶ ಗಿರಿಯಪ್ಪನವರ ಮತ್ತು ಅರಣ್ಯ ಸಿಬ್ಬಂಧಿ ಮೊಹಮ್ಮದ ಕಿಲ್ಲೇದಾರ ತಪಾಸಣೆ ನಡೆಸಿದಾಗ ಪ್ರತಿ ಆಮೆಗೆ ₹5ಲಕ್ಷಕ್ಕೆ ಅರಣ್ಯಾಧಿಕಾರಿಗಳಿಗೇ ಮಾರಾಟ ಮಾಡಲೆತ್ನಿಸಿ ಈಗ ಅರಣ್ಯಾಧಿಕಾರಿಗಳ ವಶದಲ್ಲಿದ್ದಾನೆ. ಆರೋಪಿತನ ಸಹಿತ ಬೈಕ್ ಮತ್ತು ಆಮೆ ವಶಕ್ಕೆ ಪಡೆಯಲಾಗಿದೆ. ಆರೋಪಿತ ಅಮೃತ ಶಿವಾಜಿ ಬೆನಕೆ(೪೫) ಈತ ಮಹಾರಾಷ್ಟ್ರದ ಚಂದಗಡ ತಾಲೂಕಿನ ಡೆಕೊಳಿ ಗ್ರಾಮದವನಾಗಿದ್ದಾನೆ. ಸಿಸಿಎಫ್ ಪಿ. ಬಿ. ಕರುಣಾಕರ, ಡಿಸಿಎಫ್ ಎಂ. ವಿ. ಅಮರನಾಥ ಹಾಗೂ ಎಸಿಎಫ್ ಎಸ್. ಎಂ. ಸಂಗೊಳ್ಳಿ ಮಾರ್ಗದರ್ಶನ ನೀಡಿದರು.