SHARE

ಬೆಳಗಾವಿ: ಹುತಾತ್ಮರ ಹೆಸರಲ್ಲಿ ಬೆಳಗಾವಿಯಲ್ಲಿ ಎಂಇಎಸ್ ಕುಚೋದ್ಯ ಮುಂದುವರೆಸಿದೆ. ನಗರದ ಬೋಗಾರವೆಸ್ ಮುಖ್ಯ ವೃತ್ತದಲ್ಲಿ ರ್ಯಾಲಿ ನಡೆಸಿ, ಹುತಾತ್ಮರಾದವರೆಂದು ಹೆಸರಿಸಲಾದ ಕೆಲವು ದಿವಂಗತರ ಭಾವಚಿತ್ರ ಇಟ್ಟುಕೊಂಡು ಪೂಜೆ ಸಲ್ಲಿಸಿದ್ದಾರೆ. ರ್ಯಾಲಿಯುದ್ದಕ್ಕೂ ಕನ್ನಡ ನಾಡಿನ ವಿರುದ್ಧ ಘೋಷಣೆ ಕೂಗುತ್ತ ಸಾಗಿದರು. ಬೆಳಗಾವಿ ಸೇರಿ ಇತರ ನಗರಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಘೋಷಣೆ ಕೂಗುತ್ತ ಪುಂಡಾಟ ಮೆರೆದಿದ್ದಾರೆ. ದಾದಾಗಿರಿ ನಡೆಯೊಲ್ಲ ಎಂದು ಕರ್ನಾಟಕ ಸರಕಾರಕ್ಕೆ ಎಚ್ಚರಿಕೆ ಕೊಡುವ ಯತ್ನ ಎಂಇಎಸ್ ನಡೆಸಿತು. ಬಿಗಿ ಪೊಲೀಸ್ ಬಂದೋಬಸ್ತ ವಹಿಸಲಾಗಿತ್ತು. ಎಂಇಎಸ್ ನ ಝಾಪಾ ನಾಯಕರು ಹಾಗೂ ಮರಾಠಿ ಭಾಷಿಕ ಕೆಲ ನಿರುದ್ಯೋಗಿ ಅಮಾಯಕ ಯುವಕರು ನಾಯಕರ ಈ ಪುಂಡಾಟ ಕಾರ್ಯಕ್ರಮದಲ್ಲಿ ಭಾಗಿಯಾದರು.