SHARE

ಬೆಳಗಾವಿ: ಭಾರತ ದೇಶ ಸಕ್ಕರೆ ಉತ್ಪಾದನೆಯಲ್ಲಿ ಎರಡನೇಯ ಹಾಗೂ ಬಳಕೆಯಲ್ಲಿ ಮೊದಲನೆಯ ಸ್ಥಾನ ಹೊಂದಿದೆ ಎಂದು ಕೇಂದ್ರ ಕಾರ್ಯದರ್ಶಿ ಅಶೋಕ ದಳವಾಯಿ ತಿಳಿಸುದರು. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು ಜನಸಂಖ್ಯೆಯ ಬೆಳವಣಿಗೆಯೊಂದಿಗೆ ಸಕ್ಕರೆ ಬೇಡಿಕೆಯೂ ಹೆಚ್ಚಾಗುತ್ತದೆ. 350 ಮಿಲಿಯನ್ ಟನ್ ಕಬ್ಬು ಬೆಳೆದು 26ಮಿ ಟನ್ ಸಕ್ಕರೆ ಈಗಾಗಲೇ ಉತ್ಪಾದನೆ ಆಗುತ್ತಿದೆ. ಮುಂದೆ 455ಮಿಲಿಯನ್ ಟನ್ ಕಬ್ಬು ಬೆಳೆಯುವ ಅಗತ್ಯ ದೇಶಕ್ಕೆ ಇದೆ. ಕಬ್ಬು ಹೆಚ್ಚಿನ ನೀರು ಪಡೆಯುವ ಬೆಳೆ. ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನೀರಿನ ಲಭ್ಯತೆ ಅಷ್ಟಾಗಿ ಇಲ್ಲ. ಕಬ್ಬು, ಭತ್ತ ಬೆಳೆಗಳಿಗೆ ಹೆಚ್ಚಿನ ನೀರು ಬೇಕಾಗುತ್ತದೆ. ಐರೋಪ್ಯ ರಾಷ್ಟ್ರಗಳಲ್ಲಿ ಶುಗರ್ ಬೀಟ್(ಗೆಡ್ಡೆ) ಬೆಳೆಯಲಾಗುತ್ತದೆ. ಈ ಬೀಟರೂಟ್ ಇದು ಹೆಚ್ಚಿನ ಸಕ್ಕರೆ ಅಂಶ ಹೊಂದಿದೆ. ಕಬ್ಬಿಗಿಂತ ಶೇ.2 ರಿಕವರಿ ಹೆಚ್ಚು ಶುಗರ್ ಗಡ್ಡೆಯಲ್ಲಿ ಇದೆ. ಶುಗರ್ ಗಡ್ಡೆ ಹವಾಮಾನ ಹಾಗೂ 6ತಿಂಗಳ ಬೆಳೆಯಾಗಿದೆ. ಕಬ್ಬಿಗಿಂತಲೂ ಮೊದಲು ವಾರ್ಷಿಕ ಎರಡು ಬೆಳೆ ಗಡ್ಡೆಯ ಮೂಲಕ ಪಡೆದು ನೀರು ಉಳಿಸಬಹುದು ಎಂದರು.

ಉಪ್ಪು ಮಿಶ್ರಿತ ಮಣ್ಣಿನಲ್ಲಿಯೂ ಸಹ ಈ ಗೆಡ್ಡೆ ಬೆಳೆಯಬಹುದು. 67 ಲಕ್ಷ ಹೆಕ್ಟ್ರ್ ಜಮೀನು ಸದ್ಯ ದೇಶದಲ್ಲಿ ಸಲಾಯಿನ್ ಅಂಶ ಹೊಂದಿದೆ. ದಕ್ಷಿಣ ಭಾರತದ ರಾಜ್ಯಗಳು ಟ್ರಾಫಿಕಲ್ ಆಗಿದ್ದು ಉತ್ತರ ಭಾರತ ಸಬ್ ಟ್ರಾಫಿಕಲ್ ಆಗಿದೆ. ಕಬ್ಬಿಗೆ ಪರ್ಯಾಯವಾಗಿ ಶಯಗರ್ ರೂಟ್ ಬೆಳೆಯುವಲ್ಲಿ ರೈತರು ಮನಸ್ಸು ಮಾಡಬೇಕು ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಗೋಕುಲ ಪಠನಾಯಕ, ಜೋಸ್ ಲೂಯಿಸ್, ಜಾನ್ ನೋಯಲ್ ಇತರರು ಉಪಸ್ಥಿತರಿದ್ದರು.