SHARE

ಬೆಳಗಾವಿ: ಇತ್ತೀಚೆಗೆ ಜಿಲ್ಲಾ ಆಡಳಿತದ ನಿಷೇಧದ ಮಧ್ಯೆಯೂ ಬೆಳಗಾವಿ ನಗರಕ್ಕೆ ಆಗಮಿಸಿ ಗಡಿ ಖ್ಯಾತೆ ತೆಗೆದು ಪ್ರಚೋದಿಸಿದ ಮಹಾರಾಷ್ಟ್ರದ ನಾಯಕರ ಸಂಪೂರ್ಣ ಮಾಹಿತಿ ಲಭ್ಯವಿದ್ದು, ಸದ್ಯದಲ್ಲೇ ಮಹಾರಾಷ್ಟ್ರದ ವಿರುದ್ಧ ನ್ಯಾಯಾಂಗ ನಿಂದನೆ‌ ಕೇಸ್ ದಾಖಲಿಸುತ್ತೇನೆ ಎಂದು ಗಡಿ ಹಾಗೂ ಜಲ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ಎಲ್. ಮಂಜುನಾಥ ತಿಳಿಸಿದರು.

ಇಂದು ಗಡಿ ದಾವೆ ಬಗ್ಗೆ ನಡೆದ ಮಾಹಿತಿ ಹಂಚಿಕೆ ಚರ್ಚಾ ಸಭೆಯಲ್ಲಿ ಮಾತನಾಡಿ ಸುಪ್ರೀಂ ಕೋರ್ಟ್ ನಲ್ಲಿ ಗಡಿ ವಿವಾದ ಇದ್ದಾಗಲೂ ಮಹಾರಾಷ್ಟ್ರದ ವಿವಿಧ ನಾಯಕರು ಬೆಳಗಾವಿಗೆ ಆಗಮಿಸಿ ಮುಗ್ದ ಮರಾಠಿಗರನ್ನು ಸೇರಿಸಿ ಪ್ರಚೋದನಾಕಾರಿ ಭಾಷಣ ಮಾಡುತ್ತಿರುವ ಬಗ್ಗೆ ನ್ಯಾ.‌ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಪರ ಹೋರಾಟಗಾರರಾದ ಅಶೋಕ ಚಂದರಗಿ, ಸಿದ್ದನಗೌಡ ಪಾಟೀಲ, ಮಹಾದೇವ ತಳವಾರ, ಎ. ಕೆ.‌ಕೊಟ್ರಶೆಟ್ಟಿ ಇತರರು ನ್ಯಾಯಾಂಗ ನಿಂದನೆ‌ ದಾಖಲಿಸುವಂತೆ ಕೋರಿದರು.