SHARE

ಬೆಳಗಾವಿ: ನಾನು ಹಳೆ ಮೈಸೂರು ಭಾಗದವನಾದರೂ ನಾನು ಗಡಿ ಹಾಗೂ ಜಲದ ವಿಷಯದಲ್ಲಿ ಬಹಳ ಆಸಕ್ತಿ ಮತ್ತು ಗಂಭೀರವಾಗಿದ್ದೇನೆ ಎಂದು ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ಎಲ್. ಮಂಜುನಾಥ ತಿಳಿಸಿದರು. ಇಂದು ಗಡಿ ವಿವಾದ ದಾವೆ ಮಾಹಿತಿ ಹಂಚಿಕೆ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

1980ರ ದಶಕದಲ್ಲೇ ಬೆಳಗಾವಿ ಗಡಿ ಮತ್ತು ಜಲದ ವಿಷಯದಲ್ಲಿ ಯುವಕನಾಗಿ ಹೋರಾಡಿದವನು ನಾನು. ಮುಂದೆ ನಾನು ನ್ಯಾಯಮೂರ್ತಿಯಾಗಿ ಬೆಳೆದವನು ಎಂದು ತಾವು ಬೆಳೆದು ಬಂದ ಹೋರಾಟದ ಹಾದಿಯ ಬಗ್ಗೆ ತಿಳಿಸಿದರು. ಗಡಿ ವಿವಾದ ಅಷ್ಟೇ ಅಲ್ಲ. ನಾನು ಕನ್ನಡ ಭಾಷೆ ಸಂಸ್ಕ್ರತಿಯ ವಿಷಯದಲ್ಲಿ ಧಕ್ಕೆ ಬಂದರೆ ನಾನು ತಡೆದುಕೊಳ್ಳುವವನು ನಾನಲ್ಲ ಎಂದು ಮಾರ್ಮಿಕವಾಗಿ ನುಡಿದರು. ಗಿರಿಧರ ದೇಸಾಯಿ, ಎಸ್. ಎಂ. ಕುಲಕರ್ಣಿ, ಎಂ. ಬಿ. ಝಿರ್ಲಿ, ಜಿನದತ್ತ ದೇಸಾಯಿ, ಡಿಸಿ ಎಸ್. ಬಿ. ಬೊಮ್ಮನಹಳ್ಳಿ, ಪೊಲೀಸ್ ಕಮಿಷ್ನರ್ ಲೊಕೇಶಕುಮಾರ, ಎಸ್ಪಿ ಲಕ್ಷ್ಮಣ ನಿಂಬರಗಿ, ಎಡಿಸಿ ಅಶೋಕ ದುಡಗುಂಟಿ ಇತರರು ಉಪಸ್ಥಿತರಿದ್ದರು.