SHARE

ಬೆಳಗಾವಿ: 50 ಅಡಿ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಉರುಳಿ ಬಿದ್ದು 7 ಜನ ಸಾವಿಗೀಡಾದ ಘಟನೆ ಖಾನಾಪುರ ತಾಲೂಕಿನ ಬೋಗೂರ-ಇಟಗಿ ಮಧ್ಯೆ ಇಂದು ಬೆಳಿಗ್ಗೆ ನಡೆದಿದೆ. ಸ್ಥಳದಲ್ಲಿ ನಾಲ್ವರು ಅಸುನೀಗಿದರೆ, ಮೂವರು ಆಸ್ಪತ್ರೆ ಮಾರ್ಗಮಧ್ಯೆ ಅಸುನೀಗಿದ್ದಾರೆ.

ಮೃತರನ್ನು ತಂಗ್ಯವ್ವ ಹುಣಸಿಕಟ್ಟಿ, ಅಶೋಕ ಕೇದಾರಿ, ಶಾಂತವ್ವ ಆಲಗೂಡಿ, ಗುಲಾಭಿ ಹುಂಚಿಕಟ್ಟಿ, ನಾಗವ್ವಾ ಮಾತೋಳೆ, ಶಾಂತವ್ವ ಜಿಂಝುರೇ, ನೀಲವ್ವಾ ಮುತ್ನಾಳ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದರೆ, ಉಳಿದವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಬ್ಬು ಕಟಾವಿಗೆ ಟ್ರ್ಯಾಕ್ಟರ್ ತುಂಬ ಕಾರ್ಮಿಕರು ಹೊರಟಿದ್ದಾಗ, ಜನರಿದ್ದ ಗ್ಯಾಂಗ್ ಹೊತ್ತ ಟ್ರ್ಯಾಕ್ಟರ್ ಮುಂಜಾನೆ ಬೋಗುರ ಗ್ರಾಮದಿಂದ ಇಟಗಿ ಮಾರ್ಗದಲ್ಲಿ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೋಗುರ ಸೇತುವೆ ಮೇಲಿಂದ ಹಳ್ಳಕ್ಕೆ ಉರುಳಿ ಬಿದ್ದಿದೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಮೃತರೆಲ್ಲ ಬೋಗುರ ಗ್ರಾಮದವರು ಎನ್ನಲಾಗಿದೆ. ಸ್ಥಳಕ್ಕೆ ನಂದಗಡ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು. ಎಸ್ಪಿ ಲಕ್ಷ್ಮಣ ನಿಂಬರಗಿ, ಶಾಸಕಿ ಡಾ. ಅಂಜಲಿ ನಿಂಬಾಳಕರ, ಎಎಸ್ಪಿ ಅಮರನಾಥ ರೆಡ್ಡಿ ಹಲವರು ಭೇಟಿ ನೀಡಿದರು.